ಮಂಗಳೂರು: ಕೇರಳದ ಕೊಯಿಕ್ಕೋಡ್ನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್ಗೆ ಸೋಮವಾರ ರಾತ್ರಿ ಮಂಗಳೂರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದಿತ್ತು. ಮೀನುಗಾರಿಕಾ ಬೋಟ್ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ 14 ಮಂದಿ ಮೀನುಗಾರರಿದ್ದರು. ಬೋಟ್ಗೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಿತ್ತು.
ಈ ಕುರಿತ ಮಾಹಿತಿ ತಿಳಿದು 3 ಹಡಗು ಮತ್ತು ಏರ್ಕ್ರಾಫ್ಟ್ನೊಂದಿಗೆ ಕಾರ್ಯಾಚರಣೆ ನಡೆಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದರು. ಮೂವರ ಮೃತದೇಹ ಸಿಕ್ಕಿದೆ. ಉಳಿದ 9 ಮಂದಿ ಕಣ್ಮರೆಯಾಗಿದ್ದರು. ಇದರಲ್ಲಿ ಕೆಲವರು ಮುಳುಗಿರುವ ಹಡಗಿನೊಳಗೆ ಸಿಲುಕಿರಬಹುದೆಂದು ಶಂಕಿಸಲಾಗಿದೆ.
ಸದ್ಯ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ನಾಪತ್ತೆಯಾದ 9 ಮಂದಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಮೀನುಗಾರಿಕಾ ಬೋಟ್ಗೆ ಹಡಗು ಡಿಕ್ಕಿ : ಮೂವರ ಸಾವು, 9 ಮಂದಿ ಕಣ್ಮರೆ
ಕೇರಳದ ಕೊಯಿಕ್ಕೊಡ್‌ನಿಂದ ರಬಹ ಎಂಬ ಹೆಸರಿನ ಬೋಟ್ಗೆ ರಾತ್ರಿ 2.30ರ ವೇಳೆ ಮಂಗಳೂರಿನ ಆಳಸಮುದ್ರದಲ್ಲಿ 43 ನಾಟಿಕಲ್ ಮೈಲು ದೂರದಲ್ಲಿ ಸರಕು ಹಡಗೊಂದು ಡಿಕ್ಕಿ ಹೊಡೆದಿತ್ತು. ಬೋಟ್ನಲ್ಲಿ 7 ಮಂದಿ ತಮಿಳುನಾಡು ಮತ್ತು 7 ಜನ ಪಶ್ಚಿಮ ಬಂಗಾಳದ ಮೀನುಗಾರರಿದ್ದರು. ಡಿಕ್ಕಿ ರಭಸಕ್ಕೆ ಬೋಟ್ ಸಮುದ್ರದಲ್ಲಿ ಮಗುಚಿ ಬಿದ್ದಿದೆ.