ETV Bharat / state

ಈಟಿವಿ ಭಾರತ ಫಲಶ್ರುತಿ: ನೆಟ್​​​ವರ್ಕ್​​​ ಸಮಸ್ಯೆಯಿಂದ ಟೆಂಟ್ ಹಾಕಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಮುಕ್ತಿ - ಆನ್​ಲೈನ್ ಕ್ಲಾಸ್​

ಇನ್ನೂ ಆನ್​ಲೈನ್​ ಕ್ಲಾಸ್​ ಸಂಬಂಧ ಇಲ್ಲಿನ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಂಕಷ್ಟವನ್ನು ಈಟಿವಿ ಭಾರತ ‘ಆನ್​ಲೈನ್ ಕ್ಲಾಸ್​ ಪರದಾಟ ನೆಟ್ವರ್ಕ್​ಗಾಗಿ ಬೆಟ್ಟದಲ್ಲಿ ಟೆಂಟ್ ಹಾಕಿದ ವಿದ್ಯಾರ್ಥಿಗಳು..!’ ಎಂಬ ವರದಿ ಪ್ರಕಟಿಸಿ ಅಧಿಕಾರಿಗಳು ಗಮನ ಹರಿಸುವಂತೆ ಮಾಡಿತ್ತು. ಈ ವರದಿ ಬೆನ್ನಲ್ಲೆ ದಶಕದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

finally-a-village-gotout-from-network-issue-which-etv-bharat-reported-earlier
ಈಟಿವಿ ಭಾರತ ಫಲಶ್ರುತಿ: ನೆಟ್​​​ವರ್ಕ್​​​ ಸಮಸ್ಯೆಯಿಂದ ಟೆಂಟ್ ಹಾಕಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಮುಕ್ತಿ
author img

By

Published : Sep 11, 2020, 7:07 PM IST

Updated : Sep 11, 2020, 8:51 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಶಿಬಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್​​ವರ್ಕ್ ಸಮಸ್ಯೆಯಿಂದ ಹಲವು ಕುಟುಂಬಗಳು ಸಮಸ್ಯೆಗೆ ಒಳಗಾಗಿದ್ದವು. ಆದರೆ ಇದೀಗ ಅವರ ಬದುಕಿನಲ್ಲೂ ಹೊಸ ಭರವಸೆ ಮೂಡಿದ್ದು, ಟವರ್​ ಸ್ಟೇಷನ್​ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಇಲ್ಲಿನ ಪೆರ್ಲ, ಪೊಸೋಡಿ, ಮಾರ್ಯಾಡಿ, ಬಂಗೇರಡ್ಕ, ಪತ್ತಿಮಾರು, ನೀರಾಣ, ಭಂಡಿಹೊಳೆ, ಬೂಡುದಮಕ್ಕಿ ಪರಿಸರದ ಸುಮಾರು 500 ಕುಟುಂಬಗಳು ಕಳೆದ 12 ವರ್ಷಗಳಿಂದ ಮೊಬೈಲ್ ನೆಟ್​​​​​​​ವರ್ಕ್​​​​ಗಾಗಿ ಇನ್ನಿಲ್ಲದ ಹರಸಾಹಸ ಪಡುತ್ತಿದ್ದವು. ಈ ಬಗ್ಗೆ ಅದೆಷ್ಟೋ ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದರೂ, ಫಲಿತಾಂಶ ಮಾತ್ರ ಶೂನ್ಯವಾಗಿತ್ತು.

ನೆಟ್​​​ವರ್ಕ್​​​ ಸಮಸ್ಯೆಯಿಂದ ಟೆಂಟ್ ಹಾಕಿರುವ ವಿದ್ಯಾರ್ಥಿಗಳು

ಅನ್​​​​ಲೈನ್ ಕ್ಲಾಸ್​​ಗಾಗಿ ಪರದಾಟದ ಸುದ್ದಿ ಪ್ರಕಟಿಸಿದ್ದ ಈಟಿವಿ ಭಾರತ

ಇನ್ನೂ ಆನ್​ಲೈನ್​ ಕ್ಲಾಸ್​ ಸಂಬಂಧ ಇಲ್ಲಿನ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಂಕಷ್ಟವನ್ನು ಈಟಿವಿ ಭಾರತ ‘ಆನ್​ಲೈನ್ ಕ್ಲಾಸ್​ ಪರದಾಟ: ನೆಟ್ವರ್ಕ್​ಗಾಗಿ ಬೆಟ್ಟದಲ್ಲಿ ಟೆಂಟ್ ಹಾಕಿದ ವಿದ್ಯಾರ್ಥಿಗಳು..!’ ಎಂಬ ವರದಿ ಪ್ರಕಟಿಸಿ ಅಧಿಕಾರಿಗಳು ಗಮನ ಹರಿಸುವಂತೆ ಮಾಡಿತ್ತು.

ಇದನ್ನೂ ಓದಿ: ಆನ್​ಲೈನ್ ಕ್ಲಾಸ್​ ಪರದಾಟ: ನೆಟ್ವರ್ಕ್​ಗಾಗಿ ಬೆಟ್ಟದಲ್ಲಿ ಟೆಂಟ್ ಹಾಕಿದ ವಿದ್ಯಾರ್ಥಿಗಳು..!

ಈ ವರದಿ ಬೆನ್ನಲ್ಲೆ ಶಾಸಕ ಹರೀಶ್ ಪೂಂಜಾ ಸ್ಥಳಿಯರ ಸಮಸ್ಯೆಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ಮೊಬೈಲ್ ನೆಟ್​​​ವರ್ಕ್​​​​​ ಟವರ್ ನಿರ್ಮಿಸಿ ಆ ಭಾಗದ ಜನರ ನೆಟ್​​ವರ್ಕ್​​​ ಸಮಸ್ಯೆ ದೂರ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಭಂಡಿಹೊಳೆಯಲ್ಲಿ ಟವರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳಿಯ ಪ್ರಾಧ್ಯಾಪಕಿ, ಭಂಡಿಹೊಳೆಯಲ್ಲಿ ಟವರ್ ನಿರ್ಮಾಣ ಮಾಡಲು ಸ್ಥಳ ನಿಗದಿ ಪಡಿಸಿ ಇದೀಗ ಟವರ್ ನಿರ್ಮಾಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದ್ದಾರೆ. ನಮ್ಮ ಸಮಸ್ಯೆಯ ಬಗ್ಗೆ ಈ ಸ್ಥಳಕ್ಕೆ ಬಂದು ಸಮಸ್ಯೆ ಬಗ್ಗೆ ವಿಶೇಷ ವರದಿ ಪ್ರಕಟಿಸಿದ ಈಟಿವಿ ಭಾರತ್​​​ಗೆ ಹಾಗೂ ಟವರ್ ನಿರ್ಮಾಣದ ಬಗ್ಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಇವರಿಗೂ ಈ ಭಾಗದ ಜನರ ಪರವಾಗಿ ಧನ್ಯವಾದ ಅರ್ಪಿಸಿದರು.

Last Updated : Sep 11, 2020, 8:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.