ETV Bharat / state

ನ್ಯೂ ಇಯರ್ ಪಾರ್ಟಿ​ಯಲ್ಲಿ ಗೆಳೆಯರಿಬ್ಬರ ನಡುವೆ ಗಲಾಟೆ; ಯುವಕನ ಮೂಗು ಕಚ್ಚಿದ ಸ್ನೇಹಿತ - ವೇಣೂರು ಪೋಲಿಸ್​ ಠಾಣೆ

ಹೊಸ ವರ್ಷದ ಆಚರಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರಿಬ್ಬರ ನಡುವೆ ಗಲಾಟೆ ನಡೆದಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ಗೆಳೆಯರಿಬ್ಬರ ನಡುವೆ ಗಲಾಟೆ
ಗೆಳೆಯರಿಬ್ಬರ ನಡುವೆ ಗಲಾಟೆ
author img

By ETV Bharat Karnataka Team

Published : Jan 1, 2024, 7:45 PM IST

ಬೆಳ್ತಂಗಡಿ (ದಕ್ಷಿನ ಕನ್ನಡ) : ಹೊಸ ವರ್ಷದ ಪಾರ್ಟಿಯಲ್ಲಿ ಯುವಕರ ನಡುವೆ ಗಲಾಟೆಯಾಗಿ ಯುವಕನೊಬ್ಬನ ಮೂಗನ್ನು ಕಚ್ಚಿ ತುಂಡರಿಸಿದ ಘಟನೆ ಜಿಲ್ಲೆಯ ಪಿಲ್ಯದಲ್ಲಿ ಭಾನುವಾರ ರಾತ್ರಿ ನಡೆದಿದೆ. ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಎಂಬ ಯುವಕ ಗಾಯಗೊಂಡಿದ್ದಾನೆ.

ಮೂಗು ತುಂಡರಿಸಿದ ಯುವಕ ರಾಕೇಶ್ ಎಂಬಾತ ಮೂಲತಃ ಮೂಡಿಗೆರೆ ತಾಲೂಕಿನವನಾಗಿದ್ದು, ಪ್ರಸ್ತುತ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಸಂದರ್ಭದಲ್ಲಿ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ದೀಕ್ಷಿತ್ ಮೂಗನ್ನು ರಾಕೇಶ್ ಕಚ್ಚಿ ತುಂಡರಿಸಿದ್ದಾನೆ.

ಘಟನೆಯಿಂದ ಗಂಭೀರ ಗಾಯಗೊಂಡ ದೀಕ್ಷಿತ್ ನನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಮೂಗು ತುಂಡರಿಸಿದ ಪ್ರಕರಣ ಪ್ರಥಮವಾಗಿ ದಾಖಲಾಗಿರುವುದು ದುರಂತ.

ಅಸಭ್ಯ ವರ್ತನೆ- ಧರ್ಮದೇಟು: ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಬಂದಿದ್ದ ಜೋಡಿಯ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದ ಘಟನೆ ನಡೆದಿತ್ತು. ಗರ್ಲ್ ಫ್ರೆಂಡ್ ಜೊತೆ ಯುವಕನೋರ್ವ ಬ್ರಿಗೇಡ್ ರಸ್ತೆಗೆ ಬಂದಿದ್ದ. ಈ ವೇಳೆ ನೂಕು ನುಗ್ಗಲಿನಲ್ಲಿ ಗರ್ಲ್ ಫ್ರೆಂಡ್ ಮುಟ್ಟಿದ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಬಾಯ್ ಫ್ರೆಂಡ್ ಧರ್ಮದೇಟು ಕೊಟ್ಟಿದ್ದನು. ಇನ್ನು ಅಲ್ಲೇ ಇದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಹತೋಟಿಗೆ ತಂದ ಪ್ರಸಂಗ ನಡೆದಿತ್ತು.

ಇದನ್ನೂ ಓದಿ : ಹೊಸ ವರ್ಷಾಚರಣೆ: ಎಂಜಿ, ಬ್ರಿಗೇಡ್ ರಸ್ತೆಯಲ್ಲಿ 8 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಿದ ಪಾಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.