ETV Bharat / state

ಕಾಡುಕೋಣಗಳ ಕಾಟದಿಂದ ರೈತರಿಗೆ ಪೀಕಲಾಟ; ಪುತ್ತೂರು ಗ್ರಾಮಾಂತರ ಭಾಗದಲ್ಲಿ ಕೃಷಿಹಾನಿ

ಪುತ್ತೂರು ತಾಲೂಕಿನ ಬಡಗನ್ನೂರು ಹಾಗೂ ಅರಿಯಡ್ಕ ಗ್ರಾಮ ವ್ಯಾಪ್ತಿಯ ಬಳ್ಳಿಕಾನ, ಪೆರಿಗೇರಿ, ಕೇಪುಳಕಾನ ಮೋಡಿಕೆ, ಮುಂಡೋಳೆ, ಅಂಬಟೆಮೂಲೆ ಪರಿಸರದಲ್ಲಿ ಕಾಡುಕೋಣಗಳ ಹಿಂಡು ಕಳೆದ ಕೆಲವು ತಿಂಗಳುಗಳಿಂದ ಕೃಷಿ ತೋಟಗಳನ್ನು ನಾಶ ಮಾಡುತ್ತಿವೆ. ತೋಟಗಳಿಗೆ ಈ ಕಾಡುಕೋಣಗಳು ದಾಂಗುಡಿ ಇಡುತ್ತಿದ್ದು ರೈತರು ಕೈಕಟ್ಟಿ ಕುಳಿತು ಬೆಳೆನಾಶವನ್ನು ಅಸಹಾಯಕರಾಗಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Farmers of Puttur facing problem from Gaur
ಕಾಡುಕೋಣಗಳ ಹಾವಳಿ
author img

By

Published : Mar 13, 2020, 4:37 PM IST

ಪುತ್ತೂರು: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರೈತರ ಭೂಮಿಗೆ ಕಾಡುಕೋಣಗಳು ಹಿಂಡು ಹಿಂಡಾಗಿ ಲಗ್ಗೆಯಿಡುತ್ತಿವೆ. ಸುಮಾರು 14ಕ್ಕೂ ಹೆಚ್ಚು ಕಾಡುಕೋಣಗಳು ಕೃಷಿ ತೋಟಗಳಿಗೆ ಧಾವಿಸಿ ಕೃಷಿಗೆ ವಿಪರೀತ ಹಾನಿ ಉಂಟುಮಾಡುತ್ತಿವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಈ ಸಮಸ್ಯೆಗೆ ಪರಿಹಾರ ಸೂತ್ರವೇ ಇಲ್ಲ:

ಪುತ್ತೂರು ತಾಲೂಕಿನ ಬಡಗನ್ನೂರು ಹಾಗೂ ಅರಿಯಡ್ಕ ಗ್ರಾಮ ವ್ಯಾಪ್ತಿಯ ಬಳ್ಳಿಕಾನ, ಪೆರಿಗೇರಿ, ಕೇಪುಳಕಾನ ಮೋಡಿಕೆ, ಮುಂಡೋಳೆ, ಅಂಬಟೆಮೂಲೆ ಪರಿಸರದಲ್ಲಿ ಕಾಡುಕೋಣಗಳ ಹಿಂಡು ಕಳೆದ ಕೆಲವು ತಿಂಗಳುಗಳಿಂದ ಕೃಷಿ ತೋಟಗಳನ್ನು ನಾಶ ಮಾಡುತ್ತಿವೆ. ಕೃಷಿ ತೋಟದಲ್ಲಿ ಕಾಡುಕೋಣಗಳ ಉಪಟಳವನ್ನು ರೈತರು ಕೈಕಟ್ಟಿ ಕುಳಿತು ನೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಡಗನ್ನೂರು ಗ್ರಾಮದ ಕನ್ನಡ್ಕ, ಸುಳ್ಯಪದವು ಪರಿಸರದ ಕಾಡುಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡುಕೋಣಗಳ ಹಿಂಡು ಕಂಡುಬರುತ್ತಿತ್ತು. ಆದರೆ ರೈತರ ಭೂಮಿಯ ಕಡೆಗೆ ಇವು ಹೆಚ್ಚಾಗಿ ಬರುತ್ತಿರಲಿಲ್ಲ. ಇದೀಗ ಬಳ್ಳಿಕಾನ, ಪೆರಿಗೇರಿ ಪರಿಸರದಲ್ಲಿ ಕಾಡು ಹಾಗೂ ಅಡಿಕೆ ತೋಟಗಳು ಹೆಚ್ಚಾಗಿದ್ದು, ಕಾಡಿನಿಂದ ನೇರವಾಗಿ ರೈತರ ಅಡಕೆ ತೋಟಗಳಿಗೆ ಕಾಲಿಡುತ್ತಿವೆ. ಕೆಲವೊಮ್ಮೆ ಈ ಕಾಡುಕೋಣಗಳ ಹಿಂಡು ರಸ್ತೆಗೂ ಬರುತ್ತಿದ್ದು ವಾಹನ ಸವಾರರು ಹೆದರಿ ಓಡಿದ ಘಟನೆಗಳೂ ನಡೆದಿವೆ.

ರೈತರ ತೋಟಗಳಿಗೆ ಹಿಂಡು ಹಿಂಡಾಗಿ ನುಗ್ಗಿ ಬರುತ್ತಿರುವ ಕಾಡುಕೋಣಗಳು ಬೆಳೆ ಹಾನಿ ಮಾಡುತ್ತಿವೆ.

ವನ್ಯಜೀವಿ ಕಾಯ್ದೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಭಯಪಟ್ಟು, ಕಾಡುಕೋಣಗಳು ನಡೆಸುತ್ತಿರುವ ಉಪಟಳವನ್ನು ನೋಡುವುದು ಮಾತ್ರ ರೈತರ ಕೆಲಸವಾಗಿದೆ. ತೋಟದಲ್ಲಿರುವ ಬಾಳೆ ಗಿಡಗಳು, ಎರಡು-ಮೂರು ವರ್ಷ ಬೆಳೆದು ನಿಂತು ಮೊದಲ ಹಿಂಗಾರ ಬಿಡುವ ಅಡಿಕೆ ಸಸಿಗಳು, ಚಿಕ್ಕ ತೆಂಗಿನ ಗಿಡಗಳು ಈ ಕಾಡುಕೋಣಗಳ ಹಾವಳಿಗೆ ಸಿಲುಕಿ ನಾಶವಾಗುತ್ತಿವೆ. ಇದರ ಜೊತೆಗೆ ಅಡಿಕೆ ತೋಟಕ್ಕೆ ಬಳಕೆ ಮಾಡಿರುವ ನೀರಿನ ಪೈಪುಗಳನ್ನು ಛಿದ್ರ ಮಾಡಿ ರೈತರಿಗೆ ಮತ್ತಷ್ಟು ಸಮಸ್ಯೆ ಉಂಟುಮಾಡುತ್ತಿವೆ.

ಗರ್ನಾಲ್ (ಸಿಡಿಮದ್ದು) ಮದ್ದು:

ಕಾಡುಕೋಣಗಳ ಹಾವಳಿಯಿಂದ ಬೇಸತ್ತ ರೈತ ವರ್ಗ ಕಾಡುಕೋಣಗಳು ತೋಟಕ್ಕೆ ಬಂದ ತಕ್ಷಣ ಗರ್ನಾಲ್ (ಸಿಡಿಮದ್ದು) ಸಿಡಿಸಿ ಇವುಗಳನ್ನು ಓಡಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಆದರೆ ಈ ಶಬ್ಧಕ್ಕೆ ಒಮ್ಮೆ ಓಡಿಹೋಗುವ ಕಾಡುಕೋಣಗಳು ಮತ್ತೆ ಕೆಲವೇ ಹೊತ್ತಲ್ಲಿ ತೋಟಗಳಿಗೆ ಬಂದು ರೈತರಿಗೆ ಸವಾಲು ಹಾಕುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ, ಇಲಾಖೆಯಿಂದ ಶಾಶ್ವತ ಪರಿಹಾರ ಇಲ್ಲ. ನಷ್ಟಕ್ಕೆ ಸಣ್ಣ ಮೊತ್ತದ ಪರಿಹಾರವಷ್ಟೇ ಲಭಿಸುತ್ತಿದೆ.

ಒಟ್ಟಿನಲ್ಲಿ ಇವುಗಳ ಉಪಟಳ ರೈತರನ್ನು ಹೈರಾಣಾಗಿಸಿದೆ. ಅರಣ್ಯ ಇಲಾಖೆಯ ರೈತರ ತೋಟಗಳಿಗೆ ಸಮಸ್ಯೆ ಉಂಟು ಮಾಡುತ್ತಿರುವ ಕಾಡುಕೋಣಗಳ ಕಾಟ ತಪ್ಪಿಸಲು ಮುಂದಾಗಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.