ಮಂಗಳೂರು: ಫೇಸ್ ಬುಕ್ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಪ್ರಕರಣಗಳು ನಡೆಯುತ್ತಿರುವ ನಡುವೆ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿಸಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಹೆಸರಿನಲ್ಲಿ ಖದೀಮರು ವಾಟ್ಸ್ಆ್ಯಪ್ ಖಾತೆಯನ್ನು ಸೃಷ್ಟಿಸಿದ್ದಾರೆ. 8590710748 ನಂಬರ್ನಿಂದ ದ. ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರ ಹೆಸರು ಮತ್ತು ಫೋಟೋ ಬಳಸಿ ಖಾತೆ ಸೃಷ್ಟಿಸಲಾಗಿದೆ.
ವಾಟ್ಸ್ಆ್ಯಪ್ ಮುಖಾಂತರ ಮೆಸೇಜ್ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಈ ನಂಬರ್ ನನ್ನದಾಗಿರುವುದಿಲ್ಲ. ಆದ ಕಾರಣ ನೀವು ಯಾವುದೇ ರೀತಿಯಲ್ಲಿ ಇವರಿಗೆ ಸಹಾಯ ಅಥವಾ ಹಣ ವರ್ಗಾಯಿಸಬೇಡಿ. ಆ ನಂಬರ್ ವಾಟ್ಸ್ಆ್ಯಪ್ನಲ್ಲಿ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೆನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ಓದಿ: ಕೆರೆಗಳನ್ನು ಮುಚ್ಚಿದ್ದರಿಂದಲೇ ನೆರೆ ಸ್ಥಿತಿ ಎದುರಾಗಿದೆ: ಕಂದಾಯ ಸಚಿವ ಆರ್ ಅಶೋಕ್