ಮಂಗಳೂರು (ದ.ಕ): ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಹಿಳೆಯೋರ್ವರಿಗೆ ಗ್ಯಾಂಗ್ ರೇಪ್ ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಮಂಗಳೂರು ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ಎಂಬ ಮಹಿಳೆ ಬಿಜೆಪಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ 'ಬಿಜೆಪಿ ಎಂಬ ಹಿಂದೂ ಕೋಮುವಾದಿ ಪಕ್ಷದಿಂದಾಗಿ ಎಸ್ಡಿಪಿಐ ಎಂಬ ಮುಸ್ಲಿಂ ಕೋಮುವಾದಿ ಪಕ್ಷ ಹುಟ್ಟಿದೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಎಸ್ಡಿಪಿಐಯನ್ನು ಬ್ಯಾನ್ ಮಾಡಲು ಸಾಧ್ಯ. ಆದರೆ ಇವರು ಬ್ಯಾನ್ ಮಾಡಲ್ಲ, ಯಾಕೆಂದರೆ ಇದರಿಂದ ಬಿಜೆಪಿಗೆ ಲಾಭ ಇದೆ' ಎಂದು ಬರೆದಿದ್ದರು.
ಇದಕ್ಕೆ ಜಾಲತಾಣದಲ್ಲಿ ಬಾಬುರಾವ್ ಸರ್ದೇಸಾಯಿ ಎಂಬಾತ ಇಂಥವರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾನೆ. ಅಷ್ಟೇ ಅಲ್ಲದೇ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ. ಈ ಬಗ್ಗೆ ಮಹಿಳಾ ನ್ಯಾಯವಾದಿ ನೇತೃತ್ವದಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಓದಿ: ಪಾಕ್ ಪರ ಘೋಷಣೆ ಪ್ರಕರಣ: ಫೋರೆನ್ಸಿಕ್ ಲ್ಯಾಬ್ಗೆ 4 ಮೊಬೈಲ್ಗಳ ರವಾನೆ