ಮಂಗಳೂರು : ಇಲ್ಲಿನ ಅಲೋಶಿಯಸ್ ಕಾಲೇಜಿನಲ್ಲಿರುವ ಮ್ಯೂಸಿಯಂನಲ್ಲಿ ಈವರೆಗೆ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದೀಗ ವಿವಿಧ ದೇಶಗಳ ನಾಣ್ಯಗಳನ್ನು ಸಂಗ್ರಹ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಅಲೋಶಿಯಮ್ ಮ್ಯೂಸಿಯಂನಲ್ಲಿ ವಿಶ್ವದ 82 ದೇಶಗಳ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಈ ನಾಣ್ಯಗಳು ಆಯಾ ಕಾಲದ ಇತಿಹಾಸವನ್ನು ಹೇಳಿತ್ತಿವೆ. ಇಲ್ಲಿ ಸುಮಾರು 4000 ನಾಣ್ಯಗಳ ಸಂಗ್ರಹವಿದ್ದು, 5 ವಿಭಾಗಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಏಷ್ಯಾಖಂಡದ 35 ದೇಶಗಳ 318 ನಾಣ್ಯಗಳು, ಅಮೆರಿಕಾ ವಲಯದ 6 ದೇಶಗಳ 63 ನಾಣ್ಯಗಳು,ಆಫ್ರಿಕಾ ಖಂಡದ 7 ದೇಶಗಳ 71 ನಾಣ್ಯಗಳು, ಯೂರೋಪ್ ಖಂಡದ 27 ದೇಶಗಳ 575 ನಾಣ್ಯ, ಓಷಿಯಾನಿಯಾದ 3 ದೇಶಗಳ 9 ನಾಣ್ಯ ಅಲೋಶಿಯಸ್ ಮ್ಯೂಸಿಯಂನ ಸಂಗ್ರಹದಲ್ಲಿವೆ.
ಅಲೋಶಿಯಸ್ ಮ್ಯೂಸಿಯಂನಲ್ಲಿರುವ ಅಪರೂಪದ ನಾಣ್ಯಗಳ ಸಂಗ್ರಹವೂ ಚರಿತ್ರೆ ಅಧ್ಯಯನಕಾರರಿಗೆ ಹೊಸ ಅವಕಾಶ ತೆರೆದಿದೆ. ಇತಿಹಾಸ ಸೇರಿದಂತೆ ಇತರ ವಿದ್ಯಾರ್ಥಿಗಳು ನಾಣ್ಯಗಳ ಬಗ್ಗೆ ಕುತೂಹಲದಿಂದ ವೀಕ್ಷಣೆ ಮಾಡಿ ಚರಿತ್ರೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
211 ಬಿಸಿಯ ಹಳೆಯ ನಾಣ್ಯ, ಚಿನ್ನ ಸೇರಿದಂತೆ ವಿವಿಧ ಲೋಹಗಳ ನಾಣ್ಯಗಳು ವಿವಿಧ ದೇಶಗಳ ಆರ್ಥಿಕತೆಯ ಕಥೆಗಳನ್ನು ಹೇಳುತ್ತಿವೆ. ಈ ನಾಣ್ಯಗಳ ಸಂಗ್ರಹ ಇದೀಗ ಇತಿಹಾಸ ಅಧ್ಯಯನಕಾರರು ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಬೆಳಗಾವಿ ಗಲಭೆಯ ಕಿಡಿಗೇಡಿಗಳಿಗೆ ಬುದ್ಧಿ ಕಲಿಸಿ : ಪೊಲೀಸರಿಗೆ ಗೃಹ ಸಚಿವರ ಸೂಚನೆ