ಮಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕ್ರೈಸ್ತ ಸಮಾಜದ ಮುಂದೆ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರು ಕೊರಳಿಗೆ ಶಿಲುಬೆ ಧರಿಸಿದವರಿಗೆ ಸರ್ಕಾರದ ಸವಲತ್ತುಗಳು ನೀಡಬೇಡಿ ಎಂದು ಕೆಡಿಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರೇನು ಮನೋರೋಗಕ್ಕೆ ತುತ್ತಾಗಿದ್ದಾರಾ ಎಂದು ಪ್ರಶ್ನಿಸಿದರು. ಬೇಜವಾಬ್ದಾರಿ ಹೇಳಿಕೆ ನೀಡಿರುವ ಅವರಿಗೆ ಸಂಸದರಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದರು.
ಓದಿ : ಈ ಟಿವಿ ಭಾರತ ವರದಿಗೆ ಶಾಸಕ ಡಾ. ಯತೀಂದ್ರ ಸ್ಪಂದನೆ: ವಿಶೇಷ ಚೇತನ ಮಕ್ಕಳ ಕುಟುಂಬ ಭೇಟಿ
ಕೊರಳಿನಲ್ಲಿ ಶಿಲುಬೆ ಧರಿಸುವುದು ಕ್ರಿಮಿನಲ್ ಚಟುವಟಿಕೆಯೇ ಎಂದು ಪ್ರಶ್ನಿಸಿದ ಅವರು, ಅದು ಧರ್ಮದ ಸಂಕೇತವಾಗಿದೆ. ಸಂವಿಧಾನ ವಿರೋಧಿ ಕೆಲಸವಲ್ಲ. ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಮಾ.6 ರಂದು ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.