ETV Bharat / state

ಯುರೋಪಾ 2: ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಹಡಗು - ನವ ಮಂಗಳೂರು ಬಂದರು

ಸುಮಾರು ಎರಡು ವರ್ಷಗಳ ಬಳಿಕ 'ಯುರೋಪಾ 2' ಎಂಬ ಪ್ರಪ್ರಥಮ ಐಷಾರಾಮಿ ಕ್ರೂಸ್ ನವ ಮಂಗಳೂರು ಬಂದರಿಗೆ ಆಗಮಿಸಿತು.

'Europa 2' has arrived at New Mangalore port
ಯುರೋಪಾ 2- ಐಷಾರಾಮಿ ಪ್ರವಾಸಿ ಹಡಗು
author img

By

Published : Nov 29, 2022, 10:38 AM IST

ಮಂಗಳೂರು: ಕೊರೊನಾ ಸೋಂಕು ಆರ್ಭಟದ ಬಳಿಕ ನವ ಮಂಗಳೂರು ಬಂದರಿಗೆ ಐಷಾರಾಮಿ ಪ್ರವಾಸಿ ಹಡಗು 'ಯುರೋಪಾ 2' ಆಗಮಿಸಿತು. ಯೂರೋಪ್‌ನ ಮಾಲ್ಟಾದಿಂದ ಈ ಪ್ರಯಾಣಿಕ ಕ್ರೂಸ್ ಬಂದಿದೆ.

ಎಂಎಸ್ 'ಯುರೋಪಾ 2' ನಿನ್ನೆ ಬೆಳಗ್ಗೆ 6.30ಕ್ಕೆ ನವ ಮಂಗಳೂರು ಬಂದರು ಸೇರಿತು. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲವಿರುವ ಪ್ರಯಾಣಿಕ ಹಡಗು ಗೋವಾದಿಂದ ಮಂಗಳೂರಿಗೆ ಬಂದಿದೆ. ಇದರಲ್ಲಿ 271 ಪ್ರಯಾಣಿಕರು ಹಾಗೂ 373 ಮಂದಿ ಸಿಬ್ಬಂದಿ ಇದ್ದರು.

'Europa 2' has arrived at New Mangalore port
ಯುರೋಪಾ 2- ಐಷಾರಾಮಿ ಪ್ರವಾಸಿ ಹಡಗು

ನವ ಮಂಗಳೂರು ಬಂದರು ಅಧಿಕಾರಿಗಳು ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ್ದಾರೆ. ಹಡಗಿನಿಂದಿಳಿದ ಪ್ರಯಾಣಿಕರಿಗೆ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ಬಸ್​, ಕಾರು ಹಾಗೂ ಪ್ರೀಪೇಯ್ಡ್ ಟಾಕ್ಸಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಯಾಣಿಕರು ಸಂತ ಅಲೋಶಿಯಸ್ ಕಾಲೇಜು, ಕುದ್ರೋಳಿ ದೇವಸ್ಥಾನ, ಮಾರುಕಟ್ಟೆ, ಗೇರುಬೀಜ ಕಾರ್ಖಾನೆ, ಫಿಝಾ ಮಾಲ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಧ್ಯಾಹ್ನದ ವೇಳೆಗೆ ಈ ಕ್ರೂಸ್ ಕೊಚ್ಚಿನ್ ಬಂದರಿನತ್ತ ಪ್ರಯಾಣಿಸಿದೆ.

ಇದನ್ನೂ ಓದಿ: ಐಷಾರಾಮಿ ಕ್ರೂಸ್​​ ಹಡಗು ಜೂನ್​ 8ರಿಂದ 3 ದಿನಗಳ ಪ್ರಯಾಣ ಆರಂಭ.. ಚೆನ್ನೈ, ಪುದುಚೇರಿಗೆ ಟ್ರಿಪ್​..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.