ETV Bharat / state

ಈಶ್ವರಪ್ಪ ರಾಜೀನಾಮೆ ನೀಡದಿರುವುದು ಕೆಟ್ಟ ಸಂಪ್ರದಾಯ: ಯು.ಟಿ.ಖಾದರ್ - ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್

ಗ್ರಾಮ ಪಂಚಾಯತ್​ಗೆ ಅನುದಾನ ನೀಡದೇ ಇದ್ದು ಗ್ರಾಮ ಪಂಚಾಯತ್​ನ ಕಾಮಗಾರಿಗೆ ಯಾರಾದರೂ ಪ್ರಧಾನಮಂತ್ರಿಗೆ ಪತ್ರ ಬರೆದರೆ ಪರಿಶೀಲಿಸಲು ಪತ್ರ ಬರೆಯುವ ಪ್ರಧಾನಮಂತ್ರಿಗಳು ಇದನ್ನೇಕೆ ಪರಿಶೀಲಿಸಲು ಪತ್ರ ಬರೆದಿಲ್ಲ ಎಂದು ಗುತ್ತಿಗೆದಾರನ ಆತ್ಮಹತ್ಯೆ ಸಂಬಂಧ ಯು.ಟಿ.ಖಾದರ್​ ಪ್ರತಿಕ್ರಿಯಿಸಿದ್ದಾರೆ.

ಈಶ್ವರಪ್ಪ ರಾಜೀನಾಮೆ ನೀಡದಿರುವುದು ಕೆಟ್ಟ ಸಂಪ್ರದಾಯ:  ವಿಪಕ್ಷ ಉಪನಾಯಕ ಖಾದರ್

author img

By

Published : Apr 14, 2022, 3:48 PM IST

Updated : Apr 14, 2022, 3:54 PM IST

ಮಂಗಳೂರು: ಸಚಿವ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40% ಕಮಿಷನ್ ಪಡೆಯುತ್ತಿರುವ ಬಗ್ಗೆ ಗುತ್ತಿಗೆದಾರ ಅಧ್ಯಕ್ಷರು ಆಪಾದಿಸಿದ್ದರು. ಗುತ್ತಿಗೆದಾರ ಸಂತೋಷ್ ಪ್ರಧಾನಮಂತ್ರಿಸಹಿತ ಬಿಜೆಪಿ ಮುಖಂಡರುಗಳಿಗೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಯಂತ್ಯುತ್ಸವದಂದೇ ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ: ಪೊಲೀಸರ ಬೆಂಬಲ ಆರೋಪ

ಯಾವುದೇ ವಿಷಯದಲ್ಲಿ ಪ್ರಧಾನಮಂತ್ರಿಗೆ ಪತ್ರ ಬರೆದರೆ ಅದನ್ನು ಪರಿಶೀಲಿಸಲು ಮರುಪತ್ರ ಬರೆಯುವ ಪ್ರಧಾನಮಂತ್ರಿಗಳು ಇದನ್ನು ಯಾಕೆ ಪರಿಶೀಲಿಸಲು ಪತ್ರ ಬರೆದಿಲ್ಲ. ಈ ಆತ್ಮಹತ್ಯೆಗೆ ಪರೋಕ್ಷವಾಗಿ ಯಾರು ಕಾರಣ?. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು, ಮೃತ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಯಾವುದೇ ಸಚಿವರ ವಿರುದ್ಧ ಗಂಭೀರ ಪ್ರಕರಣಗಳಲ್ಲಿ ಎಫ್​​ಐಆರ್ ದಾಖಲಾದರೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಂಪ್ರದಾಯ. ಈವರೆಗೆ ಈ ರೀತಿ ನಡೆದುಕೊಂಡು ಬಂದಿದೆ. ಆದರೆ, ಈಶ್ವರಪ್ಪ ರಾಜೀನಾಮೆ ನೀಡದೆ ಕೆಟ್ಟ ಸಂಪ್ರದಾಯ ಆಚರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Apr 14, 2022, 3:54 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.