ETV Bharat / state

ಮರಗಳ ಮಾರಣಹೋಮ‌.. ಪರಿಸರ ಪ್ರೇಮಿಗಳಿಂದ ಅಧಿಕಾರಿಗಳ ಶವಸಂಸ್ಕಾರದ ಅಣಕು ಪ್ರದರ್ಶನ - ಈಟಿವಿ ಭಾರತ ಕನ್ನಡ

ಮಂಗಳೂರಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಶವಸಂಸ್ಕಾರದ ಅಣಕು ಪ್ರದರ್ಶನ
ಶವಸಂಸ್ಕಾರದ ಅಣಕು ಪ್ರದರ್ಶನ
author img

By ETV Bharat Karnataka Team

Published : Oct 4, 2023, 8:15 AM IST

ಮಂಗಳೂರು: ನಗರದ ನಂತೂರಿನಿಂದ ಕೆಪಿಟಿವರೆಗೆ ವಾಹನ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿದ್ಧತೆ ನಡೆಸುತ್ತಿದ್ದು, ಇದರಿಂದ ಮರಗಳ ಮಾರಣ ಹೋಮವಾಗಲಿರುವ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಅಧಿಕಾರಿಗಳ ಶವಸಂಸ್ಕಾರದ ಅಣಕು ಪ್ರದರ್ಶನ ನಡೆಸಿದರು. ಮೇಲ್ಸೇತುವೆಗಾಗಿ ನಂತೂರಿನಿಂದ ಕೆಪಿಟಿವರೆಗೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಇರುವ ಮರಗಳನ್ನು ತೆರವು ಮಾಡಲು ಗುರುತಿಸಲಾಗಿತ್ತು.

ಆದರೆ ಈ ಮರಗಳನ್ನು ಕಡಿಯಲು ಮಂಗಳೂರಿನ ಪರಿಸರ ಪ್ರೇಮಿ ಸಂಘಟನೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ವಿರೋಧ ವ್ಯಕ್ತಪಡಿಸಿತ್ತು. ಆದ್ದರಿಂದ ಅರಣ್ಯ ಅಧಿಕಾರಿಗಳು ಹಾಗೂ ಎನ್ಎಚ್ಎಐ ಅಧಿಕಾರಿಗಳು ಪರಿಸರ ಪ್ರೇಮಿಗಳ ಸಮಕ್ಷಮದಲ್ಲಿ ಸಭೆ ನಡೆಸಿ 602 ಮರಗಳನ್ನು ಗುರುತಿಸಿತ್ತು. ಇದರಲ್ಲಿ 370 ಮರಗಳನ್ನು ಸ್ಥಳಾಂತರ ಮಾಡಲು 372 ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಗುರುತಿಸಿದ್ದಾರೆ. ಆದರೆ, ಇಲ್ಲಿ ಗುರುತಿಸಿರುವ ಮರಕ್ಕಿಂತ ಅಧಿಕ 40 ಮರಗಳನ್ನು ಕಡಿಯಲು ಪ್ಲ್ಯಾನ್ ಮಾಡಲಾಗಿದೆ ಎಂಬುದು ಪರಿಸರ ಪ್ರೇಮಿಗಳ ಆರೋಪವಾಗಿದೆ.

ಅಲ್ಲದೇ ಮೊದಲು ಮರಗಳನ್ನು ಸ್ಥಳಾಂತರ ಮಾಡಿ ಬಳಿಕ ಮರಗಳ ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದರು. ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ಏಕಾಏಕಿ ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ಏಜೆನ್ಸಿ ಸ್ಥಳಾಂತರ ಮಾಡಬಹುದಾದ ಮರಗಳ ಬುಡಕ್ಕೆ ಕೊಡಲಿ ಇಟ್ಟು ಮಾರಣ ಹೋಮ ಮಾಡಿದೆ. ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ತಕ್ಷಣ ಸ್ಥಳಕ್ಕೆ ದೌಢಾಯಿಸಿ ಮರ ಕಡಿಯುವುದನ್ನು ತಡೆದಿದ್ದಾರೆ.

ಬಳಿಕ ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆದಿದೆ‌. ಮರಗಳ ಮಾರಣಹೋಮ ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹೊದಿಸಿ ಅಧಿಕಾರಿಗಳ ಅಣಕು ಶವಪ್ರದರ್ಶನ ಮಾಡಿದರು.

ಆಲದ ಮರಕ್ಕೆ ಮರು ಜೀವ ತುಂಬಿದ ಜಿಲ್ಲಾಧಿಕಾರಿ: ಕೆಲದಿನಗಳ ಇಂದೆ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಕಿತ್ತೆಸೆಯಲಾಗಿದ್ದ ಹಳೆಯದಾದ 50 ವರ್ಷದ ಆಲದ ಮರವನ್ನು ಮತ್ತೆ ನೆಟ್ಟು ಅದಕ್ಕೆ ಮರು ಜೀವ ತುಂಬಿ ಪರಿಸರ ಪ್ರೇಮವನ್ನು ಮೆರೆದಿದ್ದರು. ತಂಜಾವೂರ ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಒಲಿವರ್ ಈ ಮರವನ್ನು ಮರು ನೆಡುವ ಮೂಲಕ ಜನರಿಗೆ ಜಾಗೃತಿ ಸಂದೇಶವನ್ನು ಸಾರಿದ್ದರು. ಇದಷ್ಟೇ ಅಲ್ಲದೇ ಹಸಿರು ಉಳಿಯಬೇಕು ನಾಡು ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ಮುನ್ನಡೆಯುತ್ತಿರುವ ಜಿಲ್ಲಾಧಿಕಾರಿ ಹಲವಾರು ಹೊಸ ಯೋಜನೆಗಳ ಜಾರಿಗೆ ತಂದು ಅಲ್ಲಿಯ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: ಹುಣಸೆ ಮರ ಮರಳಿ ನೆಡುತ್ತಿದ್ದಂತೆ ಮುಗಿಲು ಮುಟ್ಟಿದ ಜನರ ಹರ್ಷೋದ್ಘಾರ .. ಕೃಷಿ ವಿವಿ, ಅರಣ್ಯಾಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.