ಮಂಗಳೂರು : ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರುಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಾಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ.
ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಈವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಇತ್ತು. ಆದರೆ ನೂತನವಾಗಿ ಜಾರಿಯಾಗಿರುವ ಈ ನಿಯಮದಿಂದ ನ್ಯಾಯಾಧೀಶರು ಮಾತ್ರ ಮುಖ್ಯದ್ವಾರದಿಂದ ಪ್ರವೇಶಿಸಬಹುದು. ಇದೀಗ ವಕೀಲರ ಸಹಿತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿದ್ದು, ಈ ಬಗ್ಗೆ ಮುಖ್ಯ ದ್ವಾರದಲ್ಲಿ ಫಲಕವನ್ನು ಅಳವಡಿಸಲಾಗಿದೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ 2 ಹೋವರ್ ಕ್ರಾಫ್ಟ್ ಪಾಕ್ ಗಡಿಗೆ.. ಕಮಾಂಡರ್ ಮನೋಜ್ ವಿ ಬಾಡ್ಕರ್