ETV Bharat / state

ಪರಿಶಿಷ್ಟ ಜಾತಿ, ಪಂಗಡದವರಿಗೆ ಮಂಜೂರಾಗಿರುವ ಜಮೀನು ಅತಿಕ್ರಮಣ ಆರೋಪ - Putturu News

ಒಮ್ಮೆ ಒಬ್ಬರಿಗೆ ಮಂಜೂರಾಗಿರುವ ಜಾಗದಲ್ಲಿ ಅಕ್ರಮ-ಸಕ್ರಮ ಅಥವಾ ಬೇರೆ ಕಾಯ್ದೆ ಮೂಲಕ ಹಲವು ಕಡೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ನಮಗೆ ಮಂಜೂರಾದ ಜಮೀನಿನಲ್ಲಿ ಬೇರೆಯವರಿಗೆ ಪುನಃ ಅರ್ಜಿಗಳು ಮಂಜೂರಾಗುತ್ತವೆ ಎಂದಾದರೆ ಕಂದಾಯ ಅಧಿಕಾರಿಗಳು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಜಮೀನು ಅತಿಕ್ರಮಣ ಆರೋಪ
ಜಮೀನು ಅತಿಕ್ರಮಣ ಆರೋಪ
author img

By

Published : Aug 18, 2020, 5:57 PM IST

ಪುತ್ತೂರು: ತಾಲೂಕಿನ ವ್ಯಾಪ್ತಿಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮಂಜೂರಾಗಿರುವ ಜಮೀನುಗಳು ಅತಿಕ್ರಮಣಗೊಂಡಿದೆ. ಹೀಗೆ ಅತಿಕ್ರಮಣಸಿದವರನ್ನು ಜಮೀನಿನಿಂದ ತೆರವು ಮಾಡುವಂತೆ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಜಮೀನು ಅತಿಕ್ರಮಣ ಆರೋಪ

ಕೆಯ್ಯೂರು ಗ್ರಾಮದ ವಿಕಲಚೇತನರಾದ ತಿಮ್ಮಪ್ಪ ನಾಯ್ಕರವರ ಜಮೀನಿನಲ್ಲಿ ಅಕ್ರಮ ಕಟ್ಟಡ, ನರಿಮೊಗ್ರು ಗ್ರಾಮದ ಹುಕ್ರ ಬಿನ್ ಪತ್ರ, ಬಜತ್ತೂರು ಗ್ರಾಮದ ಚೀಂಕ್ರ ಮುಗೇರ ಅವರ ಜಾಗದಲ್ಲಿ ಅಕ್ರಮ ಮನೆಗಳು, ಒಳಮೊಗ್ರು ಗ್ರಾಮದ ಹುಕ್ರ ಮುಗೇರ ಬಿನ್ ಮಾದಿಗ ಅವರ ಜಾಗದಲ್ಲಿ ಅಕ್ರಮವಾಗಿ ಮನೆ ಮತ್ತು ಕೃಷಿ ಚಟುವಟಿಕೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಇವುಗಳನ್ನು ತೆರವುಗೊಳಿಸಿ, ಸಂಬಂಧಪಟ್ಟವರಿಗೆ ನೀಡುವಂತೆ ಈ ಹಿಂದೆ ಮನವಿ ಸಲ್ಲಿಸಲಾಗಿದೆ. ಆದರೆ ಕಂದಾಯ ಅಧಿಕಾರಿಗಳು ಇದು ಪಿಟಿಷನ್ ಕಾಯ್ದೆಗೆ ಒಳಪಟ್ಟಿದೆ. ನಮಗೆ ತೆರವು ಮಾಡಲು ಅಸಾಧ್ಯ, ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸುತ್ತಿದ್ದಾರೆ. ಆದರೆ ಒಮ್ಮೆ ಒಬ್ಬರಿಗೆ ಮಂಜೂರಾಗಿರುವ ಜಾಗದಲ್ಲಿ ಅಕ್ರಮ-ಸಕ್ರಮ ಅಥವಾ ಬೇರೆ ಕಾಯ್ದೆ ಮೂಲಕ ಹಲವು ಕಡೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ನಮಗೆ ಮಂಜೂರಾದ ಜಮೀನಿನಲ್ಲಿ ಬೇರೆಯವರಿಗೆ ಪುನಃ ಅರ್ಜಿಗಳು ಮಂಜೂರಾಗುತ್ತದೆ ಎಂದಾದರೆ ಕಂದಾಯ ಅಧಿಕಾರಿಗಳು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.