ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ವಿಜಯಾಬ್ಯಾಂಕ್ ಪೀಠ ಪರಿಸರ ವಿಜ್ಞಾನ ಮತ್ತು ಪರಿಸರ ಹಾಗೂ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಇದರ ಸಹಯೋಗದಲ್ಲಿ ಪರಿಸರ ಸ್ನೇಹಿ ಮಡಿಕೆ ಗೊಬ್ಬರ ತಯಾರಿಕೆ ಹಾಗೂ ವಾಣಿಜ್ಯ ಬೆಳೆಗಳ ಕಸಿಕಟ್ಟುವಿಕೆ ಮತ್ತು ಕೃಷಿ ಕಾರ್ಯಗಾರ ಕಾರ್ಯಕ್ರಮವನ್ನು ಮಂಗಳೂರು ರಾಮಕೃಷ್ಣ ಮಿಷನ್ನ ಏಕಗಮ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮಗೆ ಸ್ವಚ್ಚತೆಯ ಅರಿವಿದೆ, ಆದರೆ ತ್ಯಾಜ್ಯ ನಿರ್ವಹಣೆಯ ಅರಿವಿನ ಕೊರತೆ ಕಂಡುಬರುತ್ತಿದೆ. ನಾವು ಸ್ವಚ್ಚತೆಯ ಹೆಸರಿನಲ್ಲಿ ಕಸವನ್ನು ಸಂಗ್ರಹಿಸಿ ಕೊಡುತ್ತೇವೆ. ಕಸವು ಕೇಂದ್ರಿಕೃತವಾಗಿ ಊರ ಹೊರಗಿನ ನೂರಾರು ಎಕರೆ ಪ್ರದೇಶದಲ್ಲಿ ಸುರಿಯಲ್ಪಟ್ಟು ನೆಲ ಜಲವನ್ನು ಕಲುಷಿತಗೊಳಿಸಿ ವ್ಯಾಪಕವಾಗಿ ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಸಿಕಸ ನಿರ್ವಹಣೆಗೆ ಮೂರು ಮಡಿಕೆಯ ವಿಧಾನ - ಮಡಿಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಅಭಿಯಾನದ ಕಾರ್ಯಕರ್ತ ಸಚಿನ್ ಶೆಟ್ಟಿ ನಡೆಸಿಕೊಟ್ಟರು. ಇನ್ನು ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಫ್ರೋ ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಪ್ರಶಾಂತ್ ನಾಯಕ್ ಸಂಯೊಜಕರು ವಿಜಯಾಬ್ಯಾಂಕ್ ಪೀಠ, ಭಾಸ್ಕರ್ ಶಾಖಾ ವ್ಯವಸ್ಥಾಪಕರು ಬ್ಯಾಂಕ್ ಆಫ್ ಬರೋಡಾಕೊಣಾಜೆ, ಫ್ರೋ ಚಂದ್ರ ಮುಂತಾದವರು ಉಪಸ್ಥಿತಿತರಿದ್ದರು.