ETV Bharat / state

ಉಳ್ಳಾಲ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ.. ಮುಖ್ಯಮಂತ್ರಿ ಸಿದ್ದರಾಮಯ್ಯ - ಜಿಲ್ಲಾಧಿಕಾರಿ ಮುಲ್ಲೈ ‌ಮುಗಿಲನ್

ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Aug 1, 2023, 8:06 PM IST

ಉಳ್ಳಾಲ (ದಕ್ಷಿಣ ಕನ್ನಡ) : ಉಡುಪಿ, ಕಾರವಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಮುದ್ರದ ಅಲೆಗಳು ಬಿರುಸಿನಿಂದಾಗಿ ಅಪಾರ ಹಾನಿಯುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ ನಡೆಸಲು ಇಂದು ಉಳ್ಳಾಲ ತಾಲೂಕಿನ ಬಟ್ಟಪಾಡಿಗೆ ಆಗಮಿಸಿದರು. ಈ ವೇಳೆ ಸಮಸ್ಯೆಯ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ಸ್ವೀಕರ್ ಯು ಟಿ ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್ ಕೆ ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ‌ಮುಗಿಲನ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು, ಸಂತ್ರಸ್ತರಿದ್ದರು.

ಮನೆಗಳಿಗೆ ಅಪ್ಪಳಿಸುತ್ತಿರುವ ಅಲೆಗಳು: ಕಳೆದೆರಡು ದಿನಗಳಿಂದ ಉಳ್ಳಾಲ ತಾಲೂಕಿನಾದ್ಯಂತ ಮಳೆ ಸುರಿದಿದ್ದರಿಂದ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು (ಜೂನ್ 12-2023) ರಂದು ದಡಕ್ಕೆ ಅಪ್ಪಳಿಸುತ್ತಿದ್ದವು. ಉಳ್ಳಾಲದಲ್ಲಿ ನಿರಂತರ ಮಳೆ ಸುರಿಯುತ್ತಿತ್ತು. ಬೆಳಗ್ಗೆ ಮಳೆ ಧಾರಾಕಾರವಾಗಿ ಸುರಿದರೆ, ಸಂಜೆ ಹನಿ ಮಳೆ ಬರುತ್ತಿತ್ತು.

ಮಳೆ ಆರಂಭವಾಗುತ್ತಿದ್ದಂತೆ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಚರಂಡಿ ಸಮಸ್ಯೆಯಿಂದ ರಸ್ತೆಯಲ್ಲಿ ನೀರು ಹರಿದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ವಿಪರ್ಯಾಸ ಎಂದರೆ ಈ ಬಾರಿ ಕರಾವಳಿ ಜಿಲ್ಲೆಯಲ್ಲಿ ಮಳೆ ಆರಂಭವಾದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರೆದಿದೆ. ಆದರೆ ಸತತವಾಗಿ ಮಳೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಆಶಾವಾದ ಈ ಭಾಗದ ಜನರಲ್ಲಿತ್ತು.

ಹೆಚ್ಚಿದ ಸಮುದ್ರದ ಅಬ್ಬರ : ಕೈಕೋ, ಸೀಗ್ರೌಂಡ್, ಮೊಗವೀರಪಟ್ಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದವು. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದರೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದವು. ಕಡಲ್ಕೊರೆತಕ್ಕೆ ಸಮುದ್ರ ತೀರದ ರಸ್ತೆ, ಮನೆಗಳು ಸಮುದ್ರ ಪಾಲಾಗುತ್ತಿವೆ.

ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಯೋಜನೆ : ನದಿತಟಗಳ ಅತಿಕ್ರಮಣವನ್ನು ತಡೆಯಲು, ತ್ಯಾಜ್ಯ ರಾಶಿ, ನೆರೆ ಹಾವಳಿ, ಜೀವವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿದಿರು ನೆಡುತೋಪು ನಿರ್ಮಾಣದ ಇಕೋ ರೆಸ್ಟೋರೇಶನ್ ಎಂಬ ಯೋಜನೆಯನ್ನು ಅರಣ್ಯ ಇಲಾಖೆಯು ಮಂಗಳೂರಿನಲ್ಲಿ (ಜೂನ್​ 30-2022) ಹಮ್ಮಿಕೊಂಡಿತ್ತು.

ತಾಲೂಕಿನ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಎರಡೂ ಬದಿಯಲ್ಲಿ ಮತ್ತು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಈ ಯೋಜನೆ ರೂಪಿಸಲಾಗಿತ್ತು. ಮಂಗಳೂರು ತಾಲೂಕಿನಲ್ಲಿ 66 ಕಿ. ಮೀ. ಮತ್ತು ಬಂಟ್ವಾಳ ತಾಲೂಕಿನ 30 ಕಿ.ಮೀ. ನದಿ ಬದಿ ವ್ಯಾಪ್ತಿಯಲ್ಲಿ ಯೋಜನೆ ಬರುತ್ತದೆ. ಒಟ್ಟು 96 ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು 35 ಸಾವಿರ ಗಿಡಗಳನ್ನು ನೆಡಲಾಗಿತ್ತು. ಈ ಮೂಲಕ ರಾಜ್ಯದ ಮಾದರಿ ಯೋಜನೆಯಾಗಿ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಅನುಷ್ಠಾನಕ್ಕೆ ಯೋಜನೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ನದಿ ಬದಿಯ ರಕ್ಷಣೆಗೆ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಯೋಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.