ETV Bharat / state

ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಕಾರ್ಯಕ್ರಮದಲ್ಲಿ ಗಮನ ಸೆಳೆದ ಪರಿಸರ ಸ್ನೇಹಿ ಬ್ಯಾನರ್ - Eco-friendly banner

ಸೀರೆಯನ್ನೇ ಬ್ಯಾನರ್ ಆಗಿ ಪರಿವರ್ತಿಸಿ ಈ ಸೀರೆಯ ಮೇಲೆ ಅಕ್ಷರಗಳನ್ನು ಬರೆಯಲು ಪೇಂಟ್​ ಬಳಸಿಲ್ಲ. ಇದರಿಂದಾಗಿ ಈ ಸೀರೆ ಮತ್ತೆ ಬಳಕೆಗೆ ಯೋಗ್ಯವಾಗಿದೆ.

Eco-friendly banner
ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಕಾರ್ಯಕ್ರಮದಲ್ಲಿ ಗಮನ ಸೆಳೆದ ಪರಿಸರ ಸ್ನೇಹಿ ಬ್ಯಾನರ್
author img

By

Published : Oct 26, 2020, 6:01 PM IST

ಬೆಳ್ತಂಗಡಿ : ಶ್ರೀ ‌ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ಡಿ. ವೀರೇಂದ್ರ ಹೆಗ್ಗಡೆ ಅವರು‌ ಪಟ್ಟಾಭಿಷೇಕ 53ನೇ ವರ್ಧಂತ್ಯುತ್ಸವ ಸಂದರ್ಭ ವೇದಿಕೆಯ ಹಿಂದಿನ ಬ್ಯಾನರ್ ಆಗಮಿಸಿದವರ ಚಿತ್ತ ಸೆಳೆಯುತ್ತಿತ್ತು. ಸೀರೆಯನ್ನೇ ಬ್ಯಾನರ್ ಆಗಿ ಪರಿವರ್ತಿಸಿ ಮೂಲಕ ಪರಿಸರ ಸ್ನೇಹಿ ಬ್ಯಾನರ್ ಸಂದೇಶ ಸಾರುತ್ತಿತ್ತು.

ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ಈ ವಿನೂತನ ಕಾರ್ಯವನ್ನು ಕಾರ್ಯಗತಗೊಳಿಸಿದ್ದಾರೆ. ಬೆಳ್ತಂಗಡಿಯ ಕಲಾವಿದರೊಬ್ಬರು ಬ್ಯಾನರ್​ನಲ್ಲಿ ಅಕ್ಷರಗಳನ್ನು ಮೂಡಿಸಿದ್ದಾರೆ. ಈ ಸೀರೆಯಲ್ಲಿ ಅಕ್ಷರಗಳನ್ನು ಬರೆಯಲು ಪೈಂಟ್ ಬಳಸಿಲ್ಲ, ಆದ್ದರಿಂದ ಕಾರ್ಯಕ್ರಮ ಮುಗಿದ ಬಳಿಕ ಅಕ್ಷರಗಳನ್ನು ಅಳಿಸಿ ಬಟ್ಟೆಯನ್ನು ಮತ್ತೆ ಬಳಸಲೂ ಸಾಧ್ಯವಿದೆ.

ಹಾಗಾಗಿ ಈ ವಿನೂತನ ಪ್ರಯತ್ನ ಜನಮೆಚ್ಚುಗೆಗೆ ಪಾತ್ರವಾಗಿದೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮರದ ಡೆಸ್ಕ್ ಬದಲಾಗಿ ಸಿಮೆಂಟ್ ಡೆಸ್ಕ್, ಜಲಮರುಪೂರಣ, ಸಾವಯುವ ಗೊಬ್ಬರ ತಯಾರಿ ಮೊದಲಾದ ಪರಿಸರ ಸ್ನೇಹಿ ಕಾರ್ಯಗಳನ್ನು ಕೈಗೊಂಡಿದ್ದು, ಬ್ಯಾನರ್​​​​​​ನಂತಹ ಸರಳ ವಿಚಾರಗಳಿಗೂ ಆದ್ಯತೆ ನೀಡಿರುವುದು ಸಮಾಜಕ್ಕೆ ಮಾದರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.