ETV Bharat / state

ಬಂಟ್ವಾಳದಲ್ಲಿ ಐದು ಇಸಿಜಿ ಯಂತ್ರಗಳನ್ನು ಹಸ್ತಾಂತರಿಸಿದ ಕ್ಯಾಡ್ ಫೌಂಡೇಶನ್ - ಬಂಟ್ವಾಳದಲ್ಲಿ ಐದು ಇಸಿಜಿ ಯಂತ್ರಗಳ ಹಸ್ತಾಂತರ

ಬಂಟ್ವಾಳದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಸಿಯ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ,5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನ ಫ್ರೀಯಾಗಿ ಹಸ್ತಾಂತರಿಸಿದ್ದಾರೆ.

ECG machines distrubution by cad foundation
ಇಸಿಜಿ ಯಂತ್ರಗಳ ವಿತರಣೆ
author img

By

Published : Sep 8, 2020, 10:00 PM IST

ಬಂಟ್ವಾಳ/ಮಂಗಳುರು : ನಗರದಲ್ಲಿ ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ಸ್ ಫೌಂಡೇಶನ್ (ಕ್ಯಾಡ್​​​) ಯೋಜನೆಯಡಿ ಕೆಎಂಸಿಯ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ,5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನ ಉಚಿತವಾಗಿ ನೀಡಿದ್ದಾರೆ.

ಇಸಿಜಿ ಯಂತ್ರಗಳ ವಿತರಣೆ

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸಿಜಿ ಯಂತ್ರಗಳನ್ನ ವಿತರಿಸಿದ್ದು, ಬಂಟ್ವಾಳ ಆಸ್ಪತ್ರೆಗೆ 2, ಇತರೆ ಆಸ್ಪತ್ರೆಗಳಿಗೆ ಮೂರು ಯಂತ್ರಗಳನ್ನು ವಿತರಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ಕ್ಯಾಡ್ ನ ಪರವಾಗಿ ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್ ಯಂತ್ರಗಳನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗುವುದು. ತಾಲೂಕು ಸರ್ಕಾರಿ ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ವೈದ್ಯರು ಸೇವೆಗೆ ಲಭ್ಯವಿದ್ದು, ಅಗತ್ಯವಿರುವ ಅವಶ್ಯಕತೆಗಳನ್ನು ಪೂರೈಸಲಾಗುವುದು ಎಂದರು. ಈ ಸಮಯದಲ್ಲಿ ಆಸ್ಪತ್ರೆಗೆ ಮಲ್ಟಿ ಪ್ಯಾರಮೀಟರ್, ಅನಸ್ತೇಶಿಯಾ ಮೆಷಿನ್​ಗಳ ಅವಶ್ಯಕತೆಯಿದೆ ಎಂದು ಶಾಸಕರಿಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪುಷ್ಪಲತಾ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್, ಬಿಪಿಎಲ್ ಮೆಡಿಕಲ್ ಟೆಕ್ನಾಲಜಿಸ್​​ನ ರಾಕೇಶ್, ಗುರುರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.