ETV Bharat / state

ಸುಳ್ಯದಲ್ಲಿ 2.3 ಪರಿಮಾಣದಲ್ಲಿ ಭೂಕಂಪನ : ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ

ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ 2.3 ಪರಿಮಾಣದ ಭೂಕಂಪನ ದಾಖಲಾಗಿದೆ. ಇದೇ ಕಾರಣದಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಇದರ ಪ್ರತಿಫಲನದಿಂದ ಭೂಮಿ ಕಂಪಿಸಿರುವುದಾಗಿ ಹೇಳಲಾಗಿದೆ.

earth-quake-in-sulya
ಸುಳ್ಯದಲ್ಲಿ 2.3 ಪರಿಮಾಣದಲ್ಲಿ ಭೂಕಂಪನ :ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ.
author img

By

Published : Jun 25, 2022, 10:54 PM IST

ದಕ್ಷಿಣ ಕನ್ನಡ /ಸುಳ್ಯ : ಸುಳ್ಯ ತಾಲೂಕಿನ ಹಲವೆಡೆ ಶನಿವಾರ ಬೆಳಗ್ಗೆನಿಂದ ಸುದ್ದಿಯಾದ ಲಘು ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದೆ. ಇದರ ಪ್ರಕಾರ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ 2.3 ಪರಿಮಾಣದ ಭೂಕಂಪನ ದಾಖಲಾಗಿದೆ. ಇದೇ ಕಾರಣದಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಇದರ ಪ್ರತಿಫಲನದಿಂದ ಭೂಮಿ ಕಂಪಿಸಿರುವುದಾಗಿ ಹೇಳಲಾಗಿದೆ.

ಕರಿಕೆಯನ್ನು ಕೇಂದ್ರವಾಗಿಟ್ಟು ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪನವಾಗಿದೆ. ಬೆಳಗ್ಗೆ ಸುಮಾರು 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದೆ. 4.7 ಕಿಲೋಮೀಟರ್ ಮುಖ್ಯ ಸ್ಥಾನದಿಂದ ಸುತ್ತಳತೆ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದ್ದು, ಚೆಂಬು, ಸಂಪಾಜೆ ಪ್ರದೇಶಗಳಲ್ಲಿ ಭೂಕಂಪನವಾಗಿದೆ ಎಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಈ ಭೂಕಂಪನದ ಪರಿಣಾಮವಾಗಿಯೇ ಸುಳ್ಯ ತಾಲೂಕಿನ ಹಲವೆಡೆ ಭೂಕಂಪನದ ಅನುಭವ ಉಂಟಾಗಿರುವುದಾಗಿ ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

25.06.2022 ರಂದು ಕೆಎಸ್‌ಎನ್‌ಡಿಎಂಸಿ ಬಿಡುಗಡೆ ಮಾಡಿದ ಭೂಕಂಪದ ಕುರಿತು ಟಿಪ್ಪಣಿ ಈ ಪ್ರಕಾರ ಇದೆ. ಕೊಡಗು ಜಿಲ್ಲೆಯಲ್ಲಿ 2.3 ತೀವ್ರತೆಯ ಭೂಕಂಪವಾಗಿದೆ. ಭೂಕಂಪನದ ಕೇಂದ್ರ ಸ್ಥಾನ ಮಡಿಕೇರಿ ತಾಲೂಕಿನ ಕರಿಕೆ ಪ್ರದೇಶದ ಉತ್ತರ ಭಾಗದ 4.7 ಕಿ.ಮೀ ಸುತ್ತಳತೆಯಾಗಿದೆ. ತೀವ್ರತೆಯ ಪ್ರಮಾಣ 2.3 ಎಂದು ಹೇಳಲಾಗಿದೆ. ದಿನಾಂಕ 25.06.2022 ಸಮಯ 09:00:09 AM, ಅಕ್ಷಾಂಶಗಳು : ಕೊನೆಯ : 12.44 ° N ; ಉದ್ದ : 75.47 ° E ಆಳ : 10 ಕಿ.ಮೀ ಮುಂದೆ, ಕರಿಕೆ GP ಯ 4.7 kms NW ಎಂದು ಹೇಳಲಾಗಿದೆ.

earth-quake-in-sulya
ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ

ಕೇಂದ್ರೀಕೃತವಾಗಿರುವ ಭೂಕಂಪವು ಭೂಕಂಪದ ಕೇಂದ್ರದಿಂದ ಕೆಳಗಿನ ದೂರವನ್ನು ಹೊಂದಿದೆ. ಚೇಂಬೂ ಗ್ರಾಮದ 05 kms SW, ಮಡಿಕೇರಿ ತಾಲೂಕಿನ ಪಾರಾಜೆ GP, ಕೊಡಗು ಜಿಲ್ಲೆಯ ಸಂಪಾಜೆ ಹೋಬಳಿಯ 12 ಕಿಮೀ WSW, ಭೂಕಂಪದ ತೀವ್ರತೆಯು ನಕ್ಷೆಯ ಪ್ರಕಾರ ಕಡಿಮೆಯಾಗಿದೆ ಮತ್ತು ಕಂಪನವು ಗರಿಷ್ಠ 10 ರೇಡಿಯಲ್ ದೂರದವರೆಗೆ ಅನುಭವವಾಗಬಹುದು. ಭೂಕಂಪದ ಕೇಂದ್ರದಿಂದ 20 ಕಿ.ಮೀ. ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೂ ಸ್ಥಳೀಯವಾಗಿ ಸ್ವಲ್ಪ ಕಂಪನವನ್ನು ಗಮನಿಸಬಹುದು. ಭೂಕಂಪನ ವಲಯ III ರಲ್ಲಿ ಕೇಂದ್ರಬಿಂದು ಬೀಳುತ್ತದೆ ಮತ್ತು ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶವು ಯಾವುದೇ ರಚನಾತ್ಮಕ ಸ್ಥಗಿತಗಳಿಂದಲೂ ಅನೂರ್ಜಿತವಾಗಿದೆ. ಆದರಿಂದ ಗಮನಿಸಿದ ತೀವ್ರತೆ ಕಡಿಮೆ ಇರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮೂಡಲಗಿಯಲ್ಲಿ ಪತ್ತೆಯಾಗಿದ್ದು ಗಂಡು ಭ್ರೂಣಗಳು: ಬೆಳಗಾವಿ ಜಿಲ್ಲಾಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.