ETV Bharat / state

ದೇಶದಲ್ಲಿ ಉಳೀಬೇಕು ಅಂದ್ರೆ ಹಿಂದು ಸಂಘಟನೆಗಳ ವಿಷಯಕ್ಕೆ ಹೋಗ್ಬೇಡಿ: ಕಾಂಗ್ರೆಸ್‌ಗೆ ಡಿವಿಎಸ್ ಎಚ್ಚರಿಕೆ - ಈಟಿವಿ ಭಾರತ ಕನ್ನಡ

ದೇಶದಲ್ಲಿ ಶಾಂತಿ ಕಾಪಾಡುವ ವ್ಯವಸ್ಥೆಯನ್ನು ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳು ಮಾಡುತ್ತಿವೆ. ಇವುಗಳ ವಿಷಯಕ್ಕೆ ಹೋಗಬೇಡಿ ಎಂದು ಡಿವಿಎಸ್‌ ಕಾಂಗ್ರೆಸ್‌ ಪಕ್ಷಕ್ಕೆ ಎಚ್ಚರಿಕೆ ಕೊಟ್ಟರು.

ಡಿ ವಿ ಸದಾನಂದ ಗೌಡ
ಡಿ ವಿ ಸದಾನಂದ ಗೌಡ
author img

By

Published : May 3, 2023, 8:56 AM IST

Updated : May 3, 2023, 2:29 PM IST

ಕಾಂಗ್ರೆಸ್‌ಗೆ ಡಿವಿಎಸ್ ಎಚ್ಚರಿಕೆ

ಪುತ್ತೂರು: ಕಾಂಗ್ರೆಸ್ ದೇಶದಲ್ಲಿ ಉಳಿಯಬೇಕು ಎಂದಾದರೆ ಹಿಂದು ಸಂಘಟನೆಗಳ ವಿಷಯಕ್ಕೆ ಹೋಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಕುರಿತ ವಿಚಾರವಾಗಿ ಮಂಗಳವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಭಜರಂಗದಳ, ವಿಶ್ವಹಿಂದೂ ಪರಿಷತ್‌ನಂತಹ ಸಂಘಟನೆಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಈ ಹಿಂದೆ ಕಾಂಗ್ರೆಸ್ ಆರ್‌ಎಸ್‌ಎಸ್‌ ನಿಷೇಧ ಮಾಡಲು ಹೊರಟಿತ್ತು. ಹಿಂದು ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ ಎನ್ನುವುದು ಕಾಂಗ್ರೆಸ್​ನ ಹುಚ್ಚುತನದ ಪರಮಾವಧಿ. ಇದನ್ನು ಮಾಡಲು ಹೊರಟರೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡ ಹಾಗೆ ಎಂದು ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನಗಳನ್ನು ಗೆಲ್ಲಲಿದೆ. ಇದರಲ್ಲಿ ಪುತ್ತೂರು ಕೂಡಾ ಒಂದು. ಬಿಜೆಪಿ ತನ್ನ ಆಡಳಿತದ 8 ವರ್ಷದ ರಿಪೋರ್ಟ್ ಕಾರ್ಡನ್ನು ಜನರ ಮುಂದಿಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಾ ರಿಪೋರ್ಟ್​ ಕಾರ್ಡ್​ ಕೊಡಲಿ. ಆಗ ಜನತೆ ನಿರ್ಧಾರ ಮಾಡುತ್ತಾರೆ. ದೇಶದಲ್ಲಿ ಹೆದ್ದಾರಿ ಕಾಮಗಾರಿಗಳು ಶೇ.24 ರಷ್ಟು ಹೆಚ್ಚು ವೇಗದಲ್ಲಿ ನಡೆಯುತ್ತಿವೆ ಎಂದು ಇದೇ ವೇಳೆ ಹೇಳಿದರು.

ಶನಿಪೂಜೆಯಲ್ಲಿ ‘ಶನಿ’ ಬಿಡಿಸಿದ್ದೇವೆ: ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ನಮ್ಮ ಜತೆಗೇ ಇದ್ದರು. ಟಿಕೆಟ್ ಸಿಗಲಿಲ್ಲ ಎಂದು ಪಕ್ಷೇತರರಾಗಿ ಸ್ಪರ್ಧೆ ನಡೆಸುವುದು ಆದರ್ಶವಲ್ಲ. ಒಮ್ಮೆ ಶನಿಪೂಜೆಯಲ್ಲಿ ಅವರ ‘ಶನಿ’ ಬಿಡಿಸಿದ್ದೇವೆ. ಕಾಂಗ್ರೆಸ್​ನೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವ ಪಕ್ಷೇತರ ಅಭ್ಯರ್ಥಿ ಮುಂದಿನ 2 ದಿನಗಳಲ್ಲಿ ಚುನಾವಣೆಯಿಂದ ವಿತ್‌ಡ್ರಾ ಮಾಡಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಆಪ್ತಮಿತ್ರನಲ್ಲ ರಾಜಕೀಯ ಶತ್ರು: ಇಲ್ಲಿನ ಕಾಂಗ್ರೆಸ್​ ಅಭ್ಯರ್ಥಿ ಬಿಜೆಪಿಯಿಂದ ಹೊರಗೆ ಕಾಲಿಟ್ಟ ತಕ್ಷಣ ನನಗೆ ಆಪ್ತಮಿತ್ರನಲ್ಲ. ನನ್ನ ಪಾಲಿಗೆ ರಾಜಕೀಯ ಶತ್ರು. ಯಾರೆಲ್ಲ ಬಿಜೆಪಿಯಲ್ಲಿ ಇರ್ತಾರೋ ಅಲ್ಲಿ ತನಕ ಆಪ್ತಮಿತ್ರ, ಪಾಲುದಾರ. ನನ್ನ ಬೇನಾಮಿ ಆಸ್ತಿ ಅಶೋಕ್ ರೈ ಜತೆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಿದ್ದರೆ, ಸರ್ಕಾರ ಐಟಿ-ಇಡಿಗಳ ಮೂಲಕ ರಹಸ್ಯ ತನಿಖೆ ನಡೆಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಒಳಒಪ್ಪಂದ ಆಗಿದೆ. ಇದು ಹೆಚ್ಚು ಅಪಾಯಕಾರಿ. ಈ ಹಿಂದೆ ಈಶ್ವರಮಂಗಲ ಮಿನಿ ಪಾಕಿಸ್ತಾನದಂತೆ ಇತ್ತು. ಇದೀಗ ಮತ್ತೆ ಪುತ್ತೂರಿನಲ್ಲಿ ಗೂಂಡಾ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಮತ್ತು ಸ್ವಯಂಘೋಷಿತ ಹಿಂದೂ ಮುಖಂಡ ಪಕ್ಷೇತರ ಅಭ್ಯರ್ಥಿ ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಪುತ್ತೂರನ್ನು ಗೂಂಡಾರಾಜ್ಯವಾಗಲು ಬಿಜೆಪಿ ಬಿಡುವುದಿಲ್ಲ ಎಂದರು.

'ಬಜರಂಗದಳ ನಿಷೇಧಿಸಲು ಹೊರಟರೆ ಕಾಂಗ್ರೆಸ್ ನಿರ್ನಾಮ': ರಾಷ್ಟ್ರಭಕ್ತ ಸಮಾಜದ ಕಾರ್ಯ ಮಾಡುತ್ತಿರುವ ಬಜರಂಗದಳವನ್ನು ನಿಷೇಧ ಮಾಡುತ್ತೇವೆಂದು ಹೊರಟಿರುವ ಕಾಂಗ್ರೆಸ್ ಹತಾಶ ಮನೋಭಾವದಿಂದ ಯಾವ ಮಟ್ಟಕ್ಕೆ ತಲುಪಿದೆ ಎಂದು ನಮಗೆ ತಿಳಿದಿದೆ. ನಮ್ಮ ಸಂಘಟನೆಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಹೊರಟರೆ ಖಂಡಿತವಾಗಿಯೂ ನಾವು ರಕ್ಷಣೆ ಮಾಡಿದ ಗೋವುಗಳ ಶಾಪ ತಟ್ಟಲಿದೆ. ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಬಜರಂಗಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಬಜರಂಗದಳ ಪ್ರತಿಭಟನೆ

Last Updated : May 3, 2023, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.