ETV Bharat / state

ವೀರರಾಣಿ ಅಬ್ಬಕ್ಕಳ ಕಾಲದಲ್ಲಿ ಹಿಂದೂ ಮುಸ್ಲಿಂ ಭೇದಭಾವ ಇರಲಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - ಪೋರ್ಚುಗೀಸರನ್ನು ಸೋಲಿಸಿದ್ದ ವೀರರಾಣಿ ಅಬ್ಬಕ್ಕ

ಉಳ್ಳಾಲದಲ್ಲಿ ಸಂಭ್ರಮದಿಂದ ಜರುಗಿದ ವೀರರಾಣಿ ಅಬ್ಬಕ್ಕ ಉತ್ಸವ-ಪೋರ್ಚುಗೀಸರನ್ನು ಸೋಲಿಸಿದ್ದ ವೀರರಾಣಿ ಅಬ್ಬಕ್ಕ-ಅಬ್ಬಕ್ಕಳ ಕಾಲದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದಭಾವ ಇರಲಿಲ್ಲ-ವೀರರಾಣಿ ಅಬ್ಬಕ್ಕ ಮಹಿಳೆಯರಿಗೆ ಪ್ರೇರಣಾಶಕ್ತಿ ಆಗಿದ್ದಳು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Veerarani Abbakka Utsav at Ullal
ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ
author img

By

Published : Feb 5, 2023, 10:48 PM IST

ಮಂಗಳೂರು: ವೀರರಾಣಿ ಅಬ್ಬಕ್ಕಳ ಕಾಲದಿಂದಲೂ ಉಳ್ಳಾಲ ಭಾವೈಕ್ಯತೆಯ ತಾಣವಾಗಿತ್ತು. ಪೋರ್ಚುಗೀಸರ್ ವಿರುದ್ಧ ಹೋರಾಡಲು ಅಬ್ಬಕ್ಕ ರಾಣಿಯೂ ಕೇರಳದ ಕುಂಜಾಲಿಕುಟ್ಟಿ ಮಣಿಕರಣ್ ಅವರ ಸಹಾಯ ಪಡೆದಿದ್ದಳು. ಅಬ್ಬಕ್ಕಳ ಕರೆಗೆ ಸ್ಪಂದಿಸಿದ ಕುಂಜಾಲಿಕುಟ್ಟಿ ಮಣಿಕರಣ್ , ಇಬ್ಬರು ಸೇರಿ ಪೋರ್ಚುಗೀಸರನ್ನು ಸೋಲಿಸಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗ ಹಿಂದೂ ಮುಸ್ಲಿಂ ಎನ್ನುವ ಭೇದಭಾವ ಇರಲಿಲ್ಲಿ. ಸ್ವಾತಂತ್ರ್ಯ ನಂತರ ಜಾತಿ ಜಾತಿಗಳ ಮಧ್ಯೆ ಕಂದರಗಳು ನಿರ್ಮಾಣವಾಯಿತು. ಇಂಥ ಭಾವೈಕ್ಯತೆಯ ವಿಚಾರಗಳನ್ನು ಥೀಮ್ ಪಾರ್ಕ್ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಮಹಿಳೆಯರಿಗೆ ಪ್ರೇರಣಾಶಕ್ತಿ:ಉಳ್ಳಾಲ ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮನಂಥ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ರಾಜ್ಯದ ಮಹಿಳೆಯರಿಗೆ ಪ್ರೇರಣಾ ಶಕ್ತಿಯಾಗಿದ್ದು, ಅಬ್ಬಕ್ಕಳ ಶೌರ್ಯವನ್ನು ದೇಶ ವಿದೇಶಗಳಿಗೆ ತಿಳಿಸುವ ನಿಟ್ಟಿನಲ್ಲಿ ಅಬ್ಬಕ್ಕಳ ಹೆಸರಿನಲ್ಲಿ ಉಳ್ಳಾಲದಲ್ಲಿ ಥೀಮ್ ಪಾರ್ಕ್ ಆಗಬೇಕು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿ ಅವರಿಗೆ ಮತ್ತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಅಬ್ಬಕ್ಕಳ ಸಾಹಸ ಗಾಥೆ ಮಕ್ಕಳಿಗೆ ತಿಳಿಸಬೇಕು: ಅಬ್ಬಕ್ಕಳ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗಬಾರದು. ರಾಜ್ಯ ಮಟ್ಟದ ಉತ್ಸವವಾಗಿ ಸ್ವಾತಂತ್ರ್ಯ ಹೋರಾಟಗಾರರ ಉತ್ಸವ ಆಚರಿಸಲು ರಾಜ್ಯ ಸರಕಾರ ಮುಂದಾಗಬೇಕು. ಅಬ್ಬಕ್ಕ ಭವನ ನಿರ್ಮಾಣದ ಸಂದರ್ಭದಲ್ಲಿ ಸುಸಜ್ಜೀತ ಥಿಯೇಟರ್ ನಿರ್ಮಾಣ ಮಾಡಿ ಅವರ ಸಾಹಸ ಗಾಥೆಯನ್ನು ಚಿತ್ರೀಕರಣದ ಮೂಲಕ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು ಇದರೊಂದಿಗೆ ಪಠ್ಯಕ್ರಮದಲ್ಲೂ ಅಬ್ಬಕ್ಕಳ ಸಾಹಸಗಾಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ವಿಶ್ವಾಸ ಮೂಡಿಸಿದರು.

ಶೀಘ್ರ ಅಬ್ಬಕ್ಕ ಭವನ ನಿರ್ಮಾಣ ಆಗಲಿ: ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ ರಾಜೇಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವೀರರಾಣಿ ಅಬ್ಬಕ್ಕಳ ಹೆಸರನ್ನು ಚಿರಸ್ಥಾಯಿಯಾಗಿಸಲು ಕೇಂದ್ರ ಸರಕಾರ ನಿಧಿ ಸಂಚಯನ ಮಾಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕ್ರಮ ಕೈಗೊಳ್ಳಬೇಕು. ಅಬ್ಬಕ್ಕ ಭವನ ನಿರ್ಮಾಣದ ಕಾರ್ಯಕ್ಕೂ ಚಾಲನೆ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ತಿಳಿಸಿದರು.

ರಾಣಿ ಅಬ್ಬಕ್ಕಳ ವಿಚಾರಧಾರೆ ಪಠ್ಯಕ್ರಮದಲ್ಲಿ ಅಳವಡಿಕೆ ಅಗತ್ಯ: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ ಜಾತ್ಯಾತೀತ ಮನೋಭಾವನೆಯ ರಾಣಿ ಅಬ್ಬಕ್ಕಳ ವಿಚಾರಧಾರೆ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಆಗಬೇಕು. ರಾಣಿ ಅಬ್ಬಕ್ಕಳ ಭವನ ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ನೀಡಿದರೂ, ಯಾವ ಕಾರಣಕ್ಕೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಸಂಬಂಧಿಸಿದ ಇಲಾಖೆಯೊಂದಿಗೆ ವಿಚಾರಿಸಿ ಈ ಕಾರ್ಯ ನೆರವೇರಿಸಲು ಬರುವ ಅಡೆತಡೆಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:200ಕ್ಕೂ ಹೆಚ್ಚು ಚೀನಿ ಆ್ಯಪ್​ಗೆ ನಿರ್ಬಂಧ : ಬೆಟ್ಟಿಂಗ್​​ ಮತ್ತು ಲೋನ್​ ತಂತ್ರಾಂಶಗಳಿಗೆ ಕಡಿವಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.