ETV Bharat / state

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸೋದು ಸುಲಭವಿಲ್ಲ: ಪುರುಷೋತ್ತಮ ಬಿಳಿಮಲೆ - ಮಂಗಳೂರು ಸುದ್ದಿ

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುತ್ತೇವೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರುಗಳು ಹೇಳಿದಾಕ್ಷಣ ಸೇರಿಸಲು ಸುಲಭ ಸಾಧ್ಯವಿಲ್ಲ ಎಂದು ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ತುಳು ಜೋಕುಲೆ ಕೂಟ ಆಯೋಜಿಸಿರುವ ಇಲ್ಲ ಜಾಲದ ಪಾತೆರಕತೆ ಕಾರ್ಯಕ್ರಮದಲ್ಲಿ   ಪುರುಷೋತ್ತಮ ಬಿಳಿಮಲೆ ಮಾತು
ತುಳು ಜೋಕುಲೆ ಕೂಟ ಆಯೋಜಿಸಿರುವ ಇಲ್ಲ ಜಾಲದ ಪಾತೆರಕತೆ ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿಳಿಮಲೆ ಮಾತು
author img

By

Published : Dec 7, 2019, 5:58 PM IST

ಮಂಗಳೂರು : ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುತ್ತೇವೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರುಗಳು ಹೇಳಿದಾಕ್ಷಣ ಸೇರಿಸಲು ಸುಲಭ ಸಾಧ್ಯವಿಲ್ಲ. ಯಾರೂ ಈ ಬಗ್ಗೆ ಭ್ರಮೆಯಲ್ಲಿ ಬದುಕುವ ಅವಶ್ಯಕತೆ ಇಲ್ಲ, ಎಂದು ಜೆಎನ್ ಯು ಕನ್ನಡ ವಿಭಾಗದ ಮುಖ್ಯಸ್ಥ, ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ತುಳು ಜೋಕುಲೆ ಕೂಟ ಆಯೋಜಿಸಿರುವ ಇಲ್ಲ ಜಾಲದ ಪಾತೆರಕತೆ ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿಳಿಮಲೆ ಮಾತು

ಮಂಗಳೂರಿನ ತುಳು ಜೋಕುಲೆ ಕೂಟ ಆಯೋಜಿಸಿರುವ "ಇಲ್ಲ ಜಾಲದ ಪಾತೆರಕತೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತುಳು ವಿದ್ವಾಂಸ ಡಾ. ವಿವೇಕ ರೈಗಳು ಹಿಂದೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಯಾಕೆ ಸೇರಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸುಮಾರು 600 ಪುಟಗಳ ಮೆಮರಾಂಡಮನ್ನು ರಚಿಸಿದ್ದರು. ಅದನ್ನು ಅನುಮೋದಿಸಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಅದು 2004ರವರೆಗೂ ಯಾರೂ ಕೇಳುವವರಿಲ್ಲದೆ ನೆನೆಗುದಿಗೆ ಬಿದ್ದಿತ್ತು, ಆ ಕಾಲದಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ ನಿಂತು ಮಾತನಾಡಬಲ್ಲ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು, ಕೇಂದ್ರದ ಮಂತ್ರಿಯಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡೀಸ್ ಮುಂತಾದವರು ಚಕಾರತ್ತಿಲ್ಲ ಎಂದರು.

ಅಂದು ಯಾವುದೇ ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕಾದರೆ ಅದು ರಾಜ್ಯದ ಅಧಿಕೃತ ಭಾಷೆಯಾಗಿರಬೇಕು ಎಂಬ ಕಾನೂನು ಇತ್ತು‌, ಆದ್ದರಿಂದ ತುಳುವನ್ನು ಕರ್ನಾಟಕ ರಾಜ್ಯವು ಅಧಿಕೃತ ಭಾಷೆಯೆಂದು ಪರಿಗಣಿಸಬೇಕಿತ್ತು, ನಮ್ಮ ದೇಶದ ಹೆಚ್ಚಿನ ರಾಜ್ಯಗಳು ಒಂದಕ್ಕಿಂತ ಅಧಿಕ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಒಪ್ಪಿದೆ, ಆದರೆ ಕರ್ನಾಟಕದಲ್ಲಿ ಕನ್ನಡ ಒಂದೇ ಅಧಿಕೃತ ಭಾಷೆಯಾಗಿದ್ದು, ತುಳುವನ್ನು ಈವರೆಗೆ ಅಧಿಕೃತ ಭಾಷೆಯೆಂದು ಒಪ್ಪಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

2006ರಲ್ಲಿ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬಹುದೊಡ್ಡ ಅಭಿಯಾನ ನಡೆಯಿತು. ಇದೇ ಸಂದರ್ಭದಲ್ಲಿ ಬೋಡೋ, ಮೈಥಿಲಿ, ಸಂತಾಲಿ, ಡೋಗ್ರಿ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಅಭಿಯಾನ ನಡೆಯುತ್ತಿತ್ತು, ಆದರೆ ತುಳು ಹೊರತು ಪಡಿಸಿ ಉಳಿದೆಲ್ಲಾ ಭಾಷೆಗಳಿಗೆ ರಾಜಕಾರಣಿಗಳ ಬೆಂಬಲವಿತ್ತು, ಆದರೆ ತುಳುವಿನ ಬಗ್ಗೆ ಮಾತನಾಡಲು ಅಂದಿನ ಸಂಸತ್ ಸದಸ್ಯ ಧನಂಜಯ ಕುಮಾರ್ ಮಾತ್ರ ಇದ್ದರು. ಹಾಗಾಗಿ ತುಳುವನ್ನು 8ನೇ ಪರಿಚ್ಛೇದದಿಂ ಬದಿಗಿರಿಸಲಾಯಿತು ಎಂದು ಖೇದ ವ್ಯಕ್ತಪಡಿಸಿದರು.

Intro:ಮಂಗಳೂರು: ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುತ್ತೇವೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರುಗಳು ಹೇಳಿದಾಕ್ಷಣ ಸೇರಿಸಲು ಸುಲಭ ಸಾಧ್ಯವಿಲ್ಲ. ಯಾರೂ ಈ ಬಗ್ಗೆ ಭ್ರಮೆಯಲ್ಲಿ ಬದುಕುವ ಅವಶ್ಯಕತೆ ಇಲ್ಲ. ಯಾವುದೇ ಭಾಷೆಯು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಬಹಳಷ್ಟು ನೀತಿ ನಿಯಮಗಳಿವೆ ಎಂದು ಜೆಎನ್ ಯು ಕನ್ನಡ ವಿಭಾಗದ ಮುಖ್ಯಸ್ಥ, ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಗಳೂರಿನ ತುಳು ಜೋಕುಲೆ ಕೂಟ ಆಯೋಜಿಸಿರುವ ಇಲ್ಲ ಜಾಲದ ಪಾತೆರಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತುಳು ವಿದ್ವಾಂಸರ ಡಾ.ವಿವೇಕ ರೈ ಗಳು ಹಿಂದೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಕಾಲದಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಯಾಕೆ ಸೇರಬಾರದು ಎಂದು ಕೇಂದ್ರ ಸರಕಾರಕ್ಕೆ ಸಲ್ಲಿಸಲು ಸುಮಾರು 600 ಪುಟಗಳ ಮೆಮರಾಂಡಮನ್ನು ರಚಿಸಿದ್ದರು. ಅದನ್ನು ಅನುಮೋದಿಸಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಅದು 2004ರವರೆಗೂ ಯಾರೂ ಕೇಳುವವರಿಲ್ಲದೆ ನೆನೆಗುದಿಗೆ ಬಿತ್ತು ಆ ಕಾಲದಲ್ಲಿ ಈ ಬಗ್ಗೆ ಕೇಂದ್ರ ಸರಕಾರದಲ್ಲಿ ನಿಂತು ಮಾತನಾಡಬಲ್ಲ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು, ಕೇಂದ್ರದ ಮಂತ್ರಿಯಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡೀಸ್ ಮುಂತಾದವರು ಚಕಾರ ಎತ್ತಿಲ್ಲ ಎಂದು ಹೇಳಿದರು‌.

ಅಂದು ಯಾವುದೇ ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕಾದರೆ ಅದು ರಾಜ್ಯದ ಅಧಿಕೃತ ಭಾಷೆಯಾಗಿರಬೇಕು ಎಂಬ ಕಾನೂನು ಇತ್ತು‌. ಆದ್ದರಿಂದ ತುಳುವನ್ನು ಕರ್ನಾಟಕ ರಾಜ್ಯವು ಅಧಿಕೃತ ಭಾಷೆಯೆಂದು ಪರಿಗಣಿಸಬೇಕಿತ್ತು. ನಮ್ಮ ದೇಶದ ಹೆಚ್ಚಿನ ರಾಜ್ಯಗಳು ಒಂದಕ್ಕಿಂತ ಅಧಿಕ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಒಪ್ಪಿದೆ. ಆದರೆ ಕರ್ನಾಟಕ ದಲ್ಲಿ ಕನ್ನಡ ಒಂದೇ ಅಧಿಕೃತ ಭಾಷೆಯಾಗಿದ್ದು, ತುಳುವನ್ನು ಈವರೆಗೆ ಅಧಿಕೃತ ಭಾಷೆಯೆಂದು ಒಪ್ಪಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

Body:2006ರಲ್ಲಿ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬಹುದೊಡ್ಡ ಅಭಿಯಾನ ನಡೆಯಿತು. ಇದೇ ಸಂದರ್ಭ ಬೋಡೋ, ಮೈಥಿಲಿ, ಸಂತಾಲಿ, ಡೋಗ್ರಿ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಅಭಿಯಾನ ನಡೆಯುತ್ತಿತ್ತು. ಆದರೆ ತುಳು ಹೊರತು ಪಡಿಸಿ ಉಳಿದೆಲ್ಲಾ ಭಾಷೆಗಳಿಗೆ ರಾಜಕಾರಣಿಗಳ ಬೆಂಬಲವಿತ್ತು. ಆದರೆ ತುಳುವಿನ ಬಗ್ಗೆ ಮಾತನಾಡಲು ಅಂದಿನ ಸಂಸತ್ ಸದಸ್ಯ ಧನಂಜಯ ಕುಮಾರ್ ಮಾತ್ರ ಇದ್ದರು. ಉಳಿದ ಕರ್ನಾಟಕದ ಯಾವ ಸಂಸತ್ ಸದಸ್ಯನೂ ಇದನ್ನು ಅನುಮೋದಿಸಲಿಲ್ಲ. ಇದರಿಂದ ಉಳಿದ ನಾಲ್ಕೂ ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲ್ಪಟ್ಟಿತು. ಆದರೆ ತುಳುವನ್ನು ಮತ್ತೆ ಪರಿಗಣಿಲಾಗುವುದು ಎಂದು ಬದಿಗಿರಿಸಲಾಯಿತು ಎಂದು ಡಾ.ಪುರುಷೋತ್ತಮ ಬಿಳಿಮಲೆ ಖೇದ ವ್ಯಕ್ತಪಡಿಸಿದರು.

ಇಂದು ಭಾರತದಲ್ಲಿರುವ ಒಟ್ಟು ಮಾತೃಭಾಷೆಗಳು 2011 ರ ಜನಗಣತಿಯ ಪ್ರಕಾರ 19,568. ಇದರಲ್ಲಿ 22 ಭಾಷೆಗಳು ಮಾತ್ರ ಸಂವಿಧಾನದ ಪರಿಚ್ಛೇದಕ್ಕೆ ಸೇರಿವೆ. ಈ ನಡುವೆ 2006-2011 ವರೆಗೆ ತುಳುವಿನೊಂದಿಗೆ ಲಂಬಾಣಿ, ಕೊಡವ, ಭೋಜಪುರಿ, ರಾಜಸ್ತಾನಿ, ಬಂಜಾರ ಮುಂತಾದ 37 ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಡ ಬರಲಾರಂಭಿಸಿತ್ತು. ಆದರೆ ಸರಕಾರ ಅದನ್ನು ಅನುಮೋದನೆ ಮಾಡಿಲ್ಲ. ಪ್ರಸ್ತುತ ಈ ಭಾಷೆಗಳೊಂದಿಗೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ತಯಾರಾದ ಭಾಷೆ 98. ಇಂದಿನ ಈ ಪರಿಸ್ಥಿತಿಯಲ್ಲಿ ಯಾರೇ ಪ್ರಧಾನಿಯಾದರೂ ಈ 98 ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು ಕಷ್ಟವೇ. ಆದ್ದರಿಂದ ರಾಜಕಾರಣಿಗಳ ಪೊಳ್ಳು ಆಶ್ವಾಸನೆಯಿಂದು ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ ಎಂಬ ಭ್ರಮೆ ಯಾರಿಗೂ ಬೇಡ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.