ಬೆಳ್ತಂಗಡಿ: ನೂತನವಾಗಿ ಪ್ರಾರಂಭವಾಗಲಿರುವ ತಾಲೂಕು ಮೀಡಿಯಾ ಕ್ಲಬ್ನ ಲೋಗೋವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಎಲ್ಲದರಲ್ಲೂ ಒಂದು ಸಂಘಟನೆ ಬೇಕಾಗುತ್ತದೆ. ಅದು ಈಗ ದೃಶ್ಯ ಮಾಧ್ಯಮ ಬಹಳ ಪ್ರಬಲವಾಗಿರುವುದರಿಂದ ವರದಿಯಲ್ಲಿ ಆಗಲಿ, ವರದಿ ಸಂಗ್ರಹಣೆಯಲ್ಲಿ ಮತ್ತು ಎಲ್ಲಾ ರೀತಿಯಿಂದಲೂ ಜನತೆಯನ್ನು ಪ್ರಜ್ಞಾವಂತರಾಗಿ ಮಾಡುವ ಹಾಗೂ ಎಚ್ಚರಿಕೆಯನ್ನು ನೀಡಿ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ಮಾಧ್ಯಮ ಬಂಧುಗಳು ಮಾಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕನ್ನು ಪ್ರಜ್ಞಾವಂತ ತಾಲೂಕನ್ನಾಗಿ ಮಾಡುವ ಜವಾಬ್ದಾರಿ ಮಾಧ್ಯಮಕ್ಕೆ ಇದೆ. ನಿಮಗೆಲ್ಲರಿಗೂ ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೀಡಿಯಾ ಕ್ಲಬ್ನ ಅಧ್ಯಕ್ಷರಾದ ಸತೀಶ್ ಪೆರ್ಲೆ, ಕಾರ್ಯದರ್ಶಿ ಉಮೇಶ್ ಕುಲಾಲ್, ಕೋಶಾಧಿಕಾರಿ ಶರತ್, ಬಾಲಕೃಷ್ಣ ಶೆಟ್ಟಿ ದಿನೇಶ್ ಕೋಟ್ಯಾನ್, ಅನಂತ್ ಭಟ್ ನಿತಿನ್ ಉಪಸ್ಥಿತರಿದ್ದರು.