ETV Bharat / state

ದೇಶ ಕೊರೊನಾ ಮುಕ್ತವಾಗಲಿ, ಜನಜೀವನ ಸಹಜ ಸ್ಥಿತಿಯತ್ತ ತಲುಪಲಿ: ವೀರೇಂದ್ರ ಹೆಗ್ಗಡೆ - DR. D. Veerendra heggade

ಇಡೀ ದೇಶವೇ ಕೊರೊನಾ ಮುಕ್ತವಾಗಲಿ. ಇನ್ನು ಒಂದು ತಿಂಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದು ತಲುಪಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಆಶಿಸಿದರು.

DR. D. Veerendra heggade reactions on Corona as well as Lockdown
ದೇಶ ಕೊರೊನಾ ಮುಕ್ತವಾಗಲಿ...ಜನ ಜೀವನ ಸಹಜ ಸ್ಥಿತಿಯತ್ತ ತಲುಪಲಿ: ಡಾ.ಡಿ. ವೀರೇಂದ್ರ ಹೆಗ್ಗಡೆ
author img

By

Published : Apr 23, 2020, 4:54 PM IST

ಬೆಳ್ತಂಗಡಿ: ಕೊರೊನಾ ಕುರಿತು ಹೇಳುವುದಾದರೆ ಭಾರತ ದೇಶ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡತಾಗಿದೆ. ಪ್ರಧಾನಮಂತ್ರಿಗಳ ಎಚ್ಚರಿಕೆ ಜೊತೆಗೆ ರಾಜ್ಯ ಸರ್ಕಾರದ ಸಹಕಾರ ಹಾಗೂ ಪ್ರಜೆಗಳ ಸಹಕಾರದಿಂದ ಲಾಕ್​ಡೌನ್ ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಕಳೆದ 40 ದಿನಗಳಿಂದ ಒಬ್ಬ ಯಾತ್ರಿಕನೂ ಸಹ ಬಂದಿಲ್ಲ. ಅನ್ನಪೂರ್ಣ ಛತ್ರವನ್ನು ಬಂದ್ ಮಾಡಿದ್ದೇವೆ. ಜನರು ಶಿಸ್ತಿನಿಂದ ಸ್ಪಂದಿಸಿದ್ದಾರೆ. ಇಡೀ ದೇಶವೇ ಕೊರೊನಾ ಮುಕ್ತವಾಗಲಿ. ಇನ್ನು ಒಂದು ತಿಂಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ ತಲುಪಲಿ ಎಂದು ಆಶಿಸುತ್ತೇನೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ

ನಮ್ಮ ಪ್ರಧಾನಿಯ ನಿರ್ಧಾರದಿಂದ ಎಲ್ಲವೂ ಸರಿಯಾಗಲಿದೆ. ಮುಖ್ಯವಾಗಿ ಮಳೆ ಬಂದಾಗ ಕೃಷಿ ಚಟುವಟಿಕೆ ಎಂದಿನಂತೆ ನಡೆಯುವಂತಾಗಬೇಕು. ಇದಕ್ಕೆ ದೇವರ ಅನುಗ್ರಹದ ಜೊತೆಗೆ ಜನತೆಯ ಸಹಕಾರ ಇರಲಿ ಎಂದು ಪ್ರಾರ್ಥಿಸುತ್ತೇನೆ. ಸುಮಾರು 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲರೂ ಸಹಭಾಗಿತ್ವ ವಹಿಸಿದರೆ ಸಂಘಟಿತವಾಗಿ ಸಮಸ್ಯೆ ಎದುರಿಸಬಹುದು ಎಂದು ಅರಿಯಬೇಕಾಗಿದೆ. ಇನ್ನು ಕೊರೊನಾ ಮುಕ್ತ ಕ್ಷೇತ್ರವಾಗಿಸುವಲ್ಲಿ ಯಾರೂ ದೇವರ ದರ್ಶನ ಮಾಡದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗೌರವ ಕಾಪಾಡಿದ್ದಾರೆಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.