ETV Bharat / state

ಸಿದ್ದರಾಮಯ್ಯಗೆ ಮಾಹಿತಿಯ ಕೊರತೆಯಿದೆ: ಡಾ. ಸಿ. ಎನ್ ಅಶ್ವತ್ಥನಾರಾಯಣ್ - ಸಿದ್ದರಾಮಯ್ಯ ಕುರಿತು ವಾಗ್ದಾಳಿ ನಡೆಸಿದ ಡಾ. ಸಿ. ಎನ್ ಅಶ್ವತ್ಥ್​ ನಾರಾಯಣ್​​

ಯುದ್ಧಭೂಮಿಯಲ್ಲಿ ಯಾವ ದೇಶಗಳೂ ತಮ್ಮ ಪ್ರಜೆಗಳನ್ನು ರಕ್ಷಣೆ ಮಾಡಿಲ್ಲ. ಆದರೆ, ನಾವು ನಮ್ಮ ಪ್ರಜೆಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ. ಪ್ರಧಾನಿ ಮೋದಿಯವರು ಕೇಂದ್ರದ ನಾಲ್ವರು ಸಚಿವರನ್ನು ನೇಮಿಸಿ ರಕ್ಷಣಾ ಕಾರ್ಯವನ್ನು ಮಾಡಿದ್ದಾರೆ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ. ಇದೇ ವೇಳೆ ಸಚಿವ ಅಶ್ವತ್ಥ್​ನಾರಾಯಣ್​ ಮಾತನಾಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆಯಿದೆ ಎಂದು ಜರಿದಿದ್ದಾರೆ.

http://10.10.50.85:6060///finalout4/karnataka-nle/finalout/03-March-2022/14625354_thuoo.mp4
ಡಾ. ಸಿ. ಎನ್ ಅಶ್ವತ್ಥನಾರಾಯಣ್
author img

By

Published : Mar 3, 2022, 5:44 PM IST

ಮಂಗಳೂರು: ಉಕ್ರೇನ್​​ನಲ್ಲಿ ಸಿಲುಕಿರುವವರಲ್ಲಿ ಇಡೀ ವಿಶ್ವದಲ್ಲೇ ಭಾರತ ಪ್ರಥಮ ಬಾರಿಗೆ ಏರ್​ಲಿಫ್ಟ್ ಮಾಡಿದೆ. ಭಾರತದ ಮಟ್ಟದಲ್ಲಿ ಯಾವ ದೇಶವೂ ತಮ್ಮ ನಾಗರಿಕರನ್ನು ಏರ್ ಲಿಫ್ಟ್ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಮಾಹಿತಿಯ ಕೊರತೆಯಿದ್ದು, ದೇಶದ ಕಾರ್ಯವನ್ನು ಗಮನಿಸಿ ವಿರೋಧ ಮಾಡಬೇಕೆಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ್ ಹರಿಹಾಯ್ದರು.

ಡಾ. ಸಿ. ಎನ್ ಅಶ್ವತ್ಥನಾರಾಯಣ್ ಮಾತಾಡಿದರು

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಪ್ರಧಾನಿ ಮೋದಿಯವರು ನಾಲ್ವರು ಸಚಿವರನ್ನು ಉಕ್ರೇನ್ ಗೆ ಕಳುಹಿಸಿ ಸವಾಲಿನ ಕಾರ್ಯ ಮಾಡುತ್ತಿದ್ದಾರೆ. ಇಂದು ಬೇರೆ ವಿಚಾರವನ್ನು ಚರ್ಚೆ ಮಾಡಲು ಸಮಯವಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ನಮ್ಮ ಮೊದಲ ಆದ್ಯತೆ ಎಂದರು.

ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ರಾಜ್ಯದಲ್ಲಿ ಎಷ್ಟು ವೈದ್ಯಕೀಯ ಕಾಲೇಜುಗಳಿವೆ. ಎಷ್ಟು ಉಚಿತ ಸೀಟ್​ಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಪ್ರತಿಯೊಬ್ಬರನ್ನೂ ವೈದ್ಯರು ಮಾಡಲು ಸಾಧ್ಯವಿಲ್ಲ. ಡಿಮಾಂಡ್​ಗಿಂತ ಸಪ್ಲೈ ಜಾಸ್ತಿಯಿದೆ ಎಂದು ಹೇಳಿದರು.

ಭಾರತದಲ್ಲಿ ಕೊರತೆಯಿರಬಹುದು. ಆದರೆ, ರಾಜ್ಯದಲ್ಲಿ ಸಾಕಷ್ಟು ವೈದ್ಯರಿದ್ದಾರೆ. ಉಳಿದಂತೆ ಇಂತಹ ಭಾವನಾತ್ಮಕ ಸಮಯದಲ್ಲಿ ಈ ರೀತಿಯ ಚರ್ಚೆ ಮಾಡಲು ಸಮಯವಿಲ್ಲ ಎಂದು ಡಾ.ಅಶ್ವತ್ಥನಾರಾಯಣ್ ಹೇಳಿದರು.

ಸಿದ್ದರಾಮಯ್ಯ ಬೇಜವಾಬ್ದಾರಿ ವರ್ತನೆ ತೋರಿಸುತ್ತಿದ್ದಾರೆ.. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲಾಗುತ್ತಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಅವರು ಬೇಜವಾಬ್ದಾರಿ ವರ್ತನೆ ತೋರಿಸುತ್ತಿದ್ದಾರೆ. ಹಿರಿಯ ರಾಜಕಾರಣಿಯಾಗಿ ಅವರು ಈ ರೀತಿ ಮಾಡುತ್ತಿರುವುದು ದೇಶಕ್ಕೆ ಮಾಡಿರುವ ಅವಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ವಾಗ್ದಾಳಿ ನಡೆಸಿದರು.

ಇದು ಓರ್ವ ಚಾಣಾಕ್ಷ ರಾಜಕಾರಣಿಯ ನೀತಿಯಲ್ಲ. ಇದು ಸಿದ್ದರಾಮಯ್ಯರ ಸಣ್ಣತನವನ್ನು ತೋರಿಸುತ್ತಿದೆ. ಯುದ್ಧಭೂಮಿಯಲ್ಲಿ ಯಾವ ದೇಶಗಳೂ ತಮ್ಮ ಪ್ರಜೆಗಳನ್ನು ರಕ್ಷಣೆ ಮಾಡಿಲ್ಲ. ಆದರೆ, ನಮ್ಮ ಸರ್ಕಾರ ಪ್ರಜೆಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಪ್ರಧಾನಿ ಮೋದಿಯವರು ನಾಲ್ವರು ಸಚಿವರನ್ನು ನೇಮಿಸಿ ರಕ್ಷಣಾ ಕಾರ್ಯವನ್ನು ಮಾಡಿದ್ದಾರೆ‌.

ಆದರೆ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರೋಧ ಮಾಡಬೇಕೆಂದು ಹೇಳಿ ಎಲ್ಲವನ್ನೂ ವಿರೋಧಿಸುತ್ತಿದ್ದಾರೆ. ರಾಷ್ಟ್ರದ ಚಿಂತನೆಗಳನ್ನು ವಿರೋಧ ಮಾಡುವುದು ಚಿಲ್ಲರೆ ರಾಜಕಾರಣವಾಗಿದೆ. ಉಕ್ರೇನ್​​ನಲ್ಲಿ‌ ಸಿಲುಕಿರುವ ಎಲ್ಲರನ್ನೂ ರಕ್ಷಣೆ ಮಾಡುವ ಕೆಲಸವನ್ನು ಭಾರತ ಮಾಡುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್​ ಹೇಳಿದರು.

ಓದಿ: ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.