ಮಂಗಳೂರು : ಎರಡನೇ ಹಂತದ ಲಾಕ್ಡೌನ್ ನಡುವೆಯೂ ನಗರದಲ್ಲಿ ಪೊಲೀಸರ ಕಠಿಣ ಕಣ್ಗಾವಲಿನ ನಡುವೆಯೂ ಬೆಳಗಿನ ಹೊತ್ತು ವಾಹನಗಳ ಓಡಾಟ ಹೆಚ್ಚಾಗಿ ಕಂಡುಬರುತ್ತಿದೆ.
ವೈದ್ಯಕೀಯ ಸೇವೆ, ಅಗತ್ಯ ವಸ್ತುಗಳ ಸರಬರಾಜು, ಕೊರೊನಾ ವಾರಿಯರ್, ಪಾಸ್ ಹೊಂದಿರುವವರಿಗೆ ವಿನಾಯಿತಿ ನೀಡಲಾಗಿದ್ದರೂ, ಅನಗತ್ಯವಾಗಿ ಓಡಾಡುವ ವಾಹನಗಳ ಸಂಖ್ಯೆಯಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿದೆ. ಅನಗತ್ಯ ಓಡಾಟ ನಡೆಸುವವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದರೂ ಓಡಾಟಕ್ಕೆ ಕಡಿವಾಣ ಬಿದ್ದಂತಿಲ್ಲ.
ಕಳೆದ ಒಂದು ತಿಂಗಳಿನಿಂದ ಬಸ್, ಆಟೋರಿಕ್ಷಾ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಗರದಲ್ಲಿ ಸುತ್ತಾಡುವ 350 ಕ್ಕೂ ಅಧಿಕ ಬಸ್ಗಳು, 400-500 ಆಟೋರಿಕ್ಷಾಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿವೆ.
ಜೊತೆಗೆ ವ್ಯಾಪಾರ ವಹಿವಾಟು ನಡೆಯುವ ಪ್ರಮುಖ ಸ್ಥಳಗಳೆಲ್ಲ ಸಂಪೂರ್ಣ ಬಂದ್ ಆಗಿವೆ. ಈ ಪ್ರದೇಶವೂ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಪರಿಸ್ಥಿತಿಗೆ ಮುಕ್ತಿ ಯಾವಾಗ ಎಂದು ಕಾಯಬೇಕಾಗಿದೆ.