ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚುವ ಮೂಲಕ ಬಹುದೊಡ್ಡ ಅನಾಹುತ ತಪ್ಪಿಸಿದ ಕೀರ್ತಿ ಜಾಕ್ಗೆ ಸಲ್ಲುತ್ತದೆ.
ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಜೊತೆಗೆ ಜಾಕ್ ಎಂಬ ಶ್ವಾನ ಕಾರ್ಯನಿರ್ವಹಿಸುತ್ತಿದೆ. ಈ ಶ್ವಾನ ಲ್ಯಾಬ್ರಾಡಾರ್ ಜಾತಿಗೆ ಸೇರಿದೆ. ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಹೊರಗೆ ತಪಾಸಣೆ ಮಾಡುತ್ತಿದ್ದ ವೇಳೆ ಜಾಕ್ ಮೊದಲಿಗೆ ಅನುಮಾನಾಸ್ಪದ ಬ್ಯಾಗ್ ಗುರುತಿಸಿತ್ತು. ಈ ಬ್ಯಾಗ್ನಲ್ಲಿ ಸ್ಫೋಟಕದಂತಹ ಸಾಮಗ್ರಿ ಇರುವ ಬಗ್ಗೆ ಜಾಕ್ ಕಂಡು ಹಿಡಿದ ತಕ್ಷಣ, ಸಿಐಎಸ್ಎಫ್ ಸಿಬ್ಬಂದಿ ಅಲರ್ಟ್ ಆದ್ರು.
ಕೂಡಲೇ ಮಂಗಳೂರು ನಗರ ಪೊಲೀಸರಿಗೆ ಮತ್ತು ಬಾಂಬ್ ಸ್ಕ್ವಾಡ್ ಗೆ ಮಾಹಿತಿ ನೀಡಿ, ಅನುಮಾನಾಸ್ಪದ ಬ್ಯಾಗನ್ನು ಅಲ್ಲಿಂದ ಸ್ಥಳಾಂತರಿಸಿ ಬಾಂಬ್ ನಿಷ್ಕ್ರಿಯಗೊಳಿಸಲಾಗಿದೆ.