ETV Bharat / state

ಅಪ್ಪ-ಅಮ್ಮ ಕೊರೊನಾ ಕರ್ತವ್ಯದಲ್ಲಿ, ಮಗು ಮನೆಯಲ್ಲಿ... ವಿಡಿಯೋ ಕಾಲ್​ನಲ್ಲೇ ಕಂದನ ಮುದ್ದಾಟ - ವೈದ್ಯ ದಂಪತಿಗಿಲ್ಲ ಮಗುವನ್ನು ನೋಡುವ ಭಾಗ್ಯ

ಕೊರೊನಾ ವಾರಿಯರ್ಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಾವಣಗೆರೆ ಮೂಲದ ವೈದ್ಯ ದಂಪತಿ ಮಗುವನ್ನು ವಿಡಿಯೋ ಕಾಲ್​ನಲ್ಲೇ ನೋಡಿ ಸಂತಸ ಪಡುತ್ತಿದ್ದಾರೆ.

Doctor couple see their son on video call
ವಿಡಿಯೋ ಕಾಲ್​ನಲ್ಲೇ ಮುದ್ದಾಟ
author img

By

Published : May 28, 2020, 10:36 AM IST

Updated : May 29, 2020, 10:46 AM IST

ಮಂಗಳೂರು: ಕೊರೊನಾ ವಾರಿಯರ್ಸ್​ ವೈದ್ಯ ದಂಪತಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮಿಂದ ದೂರವಿರುವ ಮಗುವನ್ನು ನೋಡಲು ಸಾಧ್ಯವಾಗದೆ ವಿಡಿಯೋ ಕಾಲ್​ನಲ್ಲೇ ಮಗುವನ್ನು ನೋಡಿ ಸಂತಸ ಪಡುತ್ತಿದ್ದಾರೆ.

ವಿಡಿಯೋ ಕಾಲ್​ನಲ್ಲೇ ಕಂದನ ಮುದ್ದಾಟ

ದಾವಣಗೆರೆಯ ವೈದ್ಯ ದಂಪತಿ ಡಾ. ಗಿರೀಶ್ ಮತ್ತು ತಾಯಿ ಡಾ.ಅರುಣಾ ಎಂಬುವವರಿಗೆ ಮದುವೆಯಾಗಿ 10 ವರ್ಷದ ಬಳಿಕ ಮಗು ಜನಿಸಿತ್ತು. ಅದಕ್ಕೆ ಚಿನ್ಮಯ್​ ಎಂದು ಹೆಸರಿಟ್ಟು ಅದರೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ಹರಡಲು ಹೆಚ್ಚಾಗುತ್ತಿದ್ದಂತೆ ಮಗುವನ್ನು ಅಕ್ಕನ ಮನೆಯಲ್ಲಿ ಬಿಟ್ಟು ದಾವಣಗೆರೆಯಲ್ಲಿ ಕೊರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

Doctor couple see their son on video call
ವಿಡಿಯೋ ಕಾಲ್​ನಲ್ಲೇ ಮುದ್ದಾಟ

ಅಂದಿನಿಂದ ಇಂದಿನವರೆಗೂ ಮಗುವಿಗೆ ಅಪ್ಪ-ಅಮ್ಮನ ನೋಡುವ ಭಾಗ್ಯ ಸಾಧ್ಯವಾಗಿಲ್ಲ. ವೈದ್ಯ ದಂಪತಿ ತಮ್ಮ ಬಿಡುವಿನ ಸಮಯದಲ್ಲಿ ವಿಡಿಯೋ ಕಾಲ್​ ಮಾಡಿ ಮಗುವಿನ ಜೊತೆ ಮುದ್ದಾಟ ಮಾಡಿ ಅದರ ಆಟೋಟಗಳನ್ನು ನೋಡಿ ಸಂತಸ ಪಡುತ್ತಿದ್ದಾರೆ. ಇದರಲ್ಲೇ ತೃಪ್ತಿ ಪಡುತ್ತಿದ್ದಾರೆ.

ಇತ್ತ ಮಗು ಚಿನ್ಮಯ್ ದೊಡ್ಡಮ್ಮನ ಮನೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದು, ತಂದೆ -ತಾಯಿ ನೆನಪು ಬಂದರೂ ಮಗುವಿಗೆ ಅವರನ್ನು ವಿಡಿಯೋ ಕಾಲ್​ನಲ್ಲೇ ನೋಡುವ ಭಾಗ್ಯ ಮಾತ್ರ ಇದೆ. ವಿಡಿಯೋ ಕಾಲ್ ಮೂಲಕ ಮಗುವಿನ ಆಟ ನೋಡಿ ತಂದೆತಾಯಿ ಖುಷಿ ಪಡುತ್ತಾರೆ. ಮಗು ಕೂಡ ತಂದೆ ತಾಯಿಯನ್ನು ವಿಡಿಯೋ ಕಾಲ್​​ನಲ್ಲಿ ನೋಡಿ ಸಂತಸ ಪಡುತ್ತದೆ.

ವಿಡಿಯೋ ಕರೆ ಮುಗಿದ ಬಳಿಕ ಮಗು ತಂದೆ-ತಾಯಿಯನ್ನು ನೋಡಲು ಮತ್ತೆ ಮತ್ತೆ ಹಾತೊರೆಯುತ್ತದೆ. ಕೊರೊನಾ ಮಹಾಮಾರಿ ಬಂದ ನಂತರ ಸಾಕಷ್ಟು ಜನ ಬೇರೆ ಬೇರೆ ರೀತಿಯ ಸಮಸ್ಯೆಗೊಳಗಾಗಿದ್ದಾರೆ. ಆದರೆ ತಂದೆ-ತಾಯಿ ಕರ್ತವ್ಯದ ಕರೆಯಿಂದ ಈ ಪುಟ್ಟ ಮಗು ಅಪ್ಪ- ಅಮ್ಮನ ಜೊತೆಗಿರುವ ಸಂತಸದ ಕ್ಷಣವನ್ನು ಕಳೆದುಕೊಂಡಿದೆ.

Last Updated : May 29, 2020, 10:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.