ETV Bharat / state

'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿಗೆ ದ.ಕ ಜಿಪಂ ಆಯ್ಕೆ

ಎರಡು ವಿನೂತನ ಯೋಜನೆಗಳ ಮೂಲಕ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಸಾಲಿನ 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿಗೆ ಆಯ್ಕೆಯಾಗಿದೆ. ಏ. 24ರಂದು ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ ಈ ಪ್ರಶಸ್ತಿ ನೀಡಲಿದ್ದಾರೆ..

DK Zilla Panchayat elected for 'Deen Dayal Upadhyaya Panchayat Empowerment Award'
ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾದ ಜಿಲ್ಲಾ ಪಂಚಾಯತ್
author img

By

Published : Apr 20, 2022, 3:33 PM IST

ಮಂಗಳೂರು : ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಪಂಚಾಯತ್ ಪುರಸ್ಕಾರದಡಿ ಸಾಮಾನ್ಯ ವಿಭಾಗದಡಿ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರವು 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ -2022'ಗೆ ಆಯ್ಕೆಯಾಗಿದೆ. ಏಪ್ರಿಲ್​ 24ರಂದು ರಾಷ್ಟ್ರೀಯ ಪಂಚಾಯತ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

DK Zilla Panchayat elected for 'Deen Dayal Upadhyaya Panchayat Empowerment Award'
ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾದ ಜಿಲ್ಲಾ ಪಂಚಾಯತ್

ಈ ಸಂದರ್ಭದಲ್ಲಿ ದೇಶಾದ್ಯಂತ ಪ್ರತಿ ರಾಜ್ಯದಿಂದ ಒಂದು ಜಿಲ್ಲಾ ಪಂಚಾಯತ್ ಅನ್ನು 'ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿ ಸಾಮಾನ್ಯ ವಿಭಾಗದಲ್ಲಿ ನಿಗದಿಪಡಿಸಿರುವ ಎಲ್ಲಾ ಅಂಶಗಳಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಹಾಗೂ 2021-22ರ ಎಲ್ಲಾ ಕಾರ್ಯಕ್ಷಮತೆಯನ್ನು ಪರಿಗಣಿ ಜೊತೆಗೆ ಪ್ರಗತಿಯನ್ನು ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಜಿಲ್ಲಾ ಪಂಚಾಯತ್​ ಎರಡು ವಿನೂತನ ಯೋಜನೆಗಳ ಮೂಲಕ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಗಮನವನ್ನು ಸೆಳೆದಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಪ್ರಶಸ್ತಿಗೆ ರಾಜ್ಯದಿಂದ ಈ ಜಿಲ್ಲಾ ಪಂಚಾಯತ್ ಅನ್ನು ಆಯ್ಕೆ ಮಾಡಸಾಗಿದೆ. ಏ.24ರಂದು ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ ಈ ಪ್ರಶಸ್ತಿಯನ್ನು ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.