ETV Bharat / state

ದ.ಕ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಎಂಆರ್​​ಪಿಎಲ್​ನಿಂದ ರಕ್ಷಣಾ ಸಾಮಗ್ರಿ ಹಸ್ತಾಂತರ!! - kota shrinivas pujari news

ಪೊಲೀಸರು, ಹೋಮ್ ಗಾರ್ಡ್​ಗಳು, ಅರಣ್ಯ ಇಲಾಖಾ ಅಧಿಕಾರಿಗಳು, ಇನ್ನಿತರ ವಿಪತ್ತು ನಿರ್ವಹಣೆ ಮಾಡುವವರಿಗೆ ಸಮಸ್ಯೆಗಳು ಉಂಟಾಗುತ್ತದೆ. ಮೂಲಭೂತ ಸಾಮಗ್ರಿಗಳಿಲ್ಲದೆ ಸಂಕಷ್ಟಗಳು ಎದುರಾಗುತ್ತದೆ. ವಿಪತ್ತುಗಳು ಎದುರಾದಾಗ ಈ ಸಾಮಗ್ರಿಗಳು ಸದುಪಯೋಗವಾಗಲಿ..

D.K Transfer of Defense Equipment
ಎಂಆರ್​​ಪಿಎಲ್​ನಿಂದ ರಕ್ಷಣಾ ಸಾಮಾಗ್ರಿ ಹಸ್ತಾಂತರ
author img

By

Published : Jun 22, 2020, 9:31 PM IST

ಮಂಗಳೂರು : ದ.ಕ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಯೋಗಕ್ಕೆ ಎಂಆರ್​​ಪಿಎಲ್-ಸಿಎಸ್ಆರ್ ನಿಧಿಯಿಂದ ನೀಡಲಾದ ರಕ್ಷಣಾ ಸಾಮಗ್ರಿಗಳ ಹಸ್ತಾಂತರ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಂಆರ್​​ಪಿಎಲ್ ಸಂಸ್ಥೆಯು ಒಂದು ಕೋಟಿ ರೂ. ವೆಚ್ಚದಲ್ಲಿ 20 ರಕ್ಷಣಾ ಸಾಮಗ್ರಿಗಳನ್ನು ವಿತರಣೆ ಮಾಡಿರುವುದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತದ ಪರ ಧನ್ಯವಾದ ತಿಳಿಸಿದರು.

ಪೊಲೀಸರು, ಹೋಮ್ ಗಾರ್ಡ್​ಗಳು, ಅರಣ್ಯ ಇಲಾಖಾ ಅಧಿಕಾರಿಗಳು, ಇನ್ನಿತರ ವಿಪತ್ತು ನಿರ್ವಹಣೆ ಮಾಡುವವರಿಗೆ ಸಮಸ್ಯೆಗಳು ಉಂಟಾಗುತ್ತದೆ. ಮೂಲಭೂತ ಸಾಮಗ್ರಿಗಳಿಲ್ಲದೆ ಸಂಕಷ್ಟಗಳು ಎದುರಾಗುತ್ತದೆ. ವಿಪತ್ತುಗಳು ಎದುರಾದಾಗ ಈ ಸಾಮಗ್ರಿಗಳು ಸದುಪಯೋಗವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂಆರ್‌ಪಿಎಲ್‌ನ ಸಂಸ್ಕರಣಾಗಾರದ ನಿರ್ದೇಶಕ ಸಂಜಯ್ ವರ್ಮಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.