ETV Bharat / state

ಬ್ಲ್ಯಾಕ್​ ಫಂಗಸ್ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ: ಡಿಕೆ ಶಿವಕುಮಾರ್​ - Dk shivakumar visits dharmasthala

ಗುಜರಾತ್‌ಗೆ ಕೇಂದ್ರ ಸರ್ಕಾರ ಔಷಧಿ ನೀಡಿರುವಂತೆ ನಮ್ಮ ರಾಜ್ಯದ ಜನರ ಪ್ರಾಣ ಉಳಿಸುವುದಕ್ಕೆ ಇಲ್ಲಿಯೂ ತರಿಸಿಟ್ಟುಕೊಳ್ಳಬೇಕು ಎಂದು ಡಿಕೆಶಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Dk shivakumar
Dk shivakumar
author img

By

Published : May 25, 2021, 1:55 AM IST

ಬೆಳ್ತಂಗಡಿ: ರಾಜ್ಯ ಸರ್ಕಾರ ಬ್ಲ್ಯಾಕ್​ ಫಂಗಸ್ ಹಾಗೂ ವೈಟ್ ಫಂಗಸ್​​ ತಡೆಗಟ್ಟಲು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಸೋಮವಾರ ಧರ್ಮಸ್ಥಳದ ಹೆಲಿಪಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವರಿಂದಲೇ ಗೊಂದಲದ ಹೇಳಿಕೆಗಳು ಹೊರಬರುತ್ತಿವೆ. ಫಂಗಸ್‌ಗಳ ಕುರಿತು ಸರ್ಕಾರದ ಬಳಿ ಸ್ಪಷ್ಟವಾದ ಮಾಹಿತಿ ಇಲ್ಲ. ರಾಜ್ಯದಲ್ಲಿ ಇನ್ನೂ ಸಮರ್ಪಕವಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ಜನರು ಗಾಬರಿಯಾಗಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಮನವಿ ಮಾಡುತ್ತೇನೆ. ಗುಜರಾತ್‌ಗೆ ಕೇಂದ್ರ ಸರಕಾರ ಔಷಧಿ ನೀಡಿರುವಂತೆ ನಮ್ಮ ಜನರ ಪ್ರಾಣ ಉಳಿಸುವುದಕ್ಕೆ ಇಲ್ಲಿಯೂ ತರಿಸಿಟ್ಟುಕೊಳ್ಳಬೇಕು. ಕೂಡಲೇ ನಮ್ಮ ರಾಜ್ಯದಲ್ಲಿ ಬ್ಲ್ಯಾಕ್​​ ಮತ್ತು ವೈಟ್​ ಫಂಗಸ್‌ಗಳ ಕುರಿತು ಮುಂಜಾಗ್ರತೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು.ಕೋವಿಡ್ ನಿಯಂತ್ರಣಕ್ಕೆ ಸಹಕಾರ ಕೊಟ್ಟಂತೆ ಇದಕ್ಕೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ಪೊಲೀಸ್​​ ಠಾಣೆಯಲ್ಲಿ ಮೂತ್ರ ಕುಡಿಸಿದ ಪ್ರಕರಣದಲ್ಲಿ ಕೇವಲ ತನಿಖೆಯ ನಾಟಕವಾಡಿ ಪ್ರಕರಣವನ್ನು ಮುಗಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದ ಡಿಕೆಶಿ, ಎಸ್​ಸಿ ಮತ್ತು ಎಸ್​ಟಿ ಆಯೋಗದವರು ಈಗ ಎಲ್ಲಿದ್ದಾರೆ. ಸಮಾಜ ಕಲ್ಯಾಣ ಸಚಿವರೂ ಈ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮಾನವ ಹಕ್ಕುಗಳ ಆಯೋಗವೂ ಈ ಕುರಿತು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು. ನಮ್ಮ ರಾಜ್ಯದ ಕಾನೂನು ಏನು? ಸರೋಜಿನಿ ಮಹಿಷಿ ಏನು ಹೇಳುತ್ತದೆಯೆಂದರೆ, ನಮ್ಮವರಿಗೆ ಉದ್ಯೋಗ ನೀಡಬೇಕು. ಕೇವಲ ಬೆರಳೆಣಿಕೆ ಜನರಿಗೆ ಉದ್ಯೋಗ ನೀಡಿದರೆ ಸಾಲದು. ನಮ್ಮ ಕರಾವಳಿ ಹಾಗೂ ಮಲೆನಾಡು ಜನರು ಹೋರಾಟ ಮಾಡಬೇಕಾಗುತ್ತದೆ. ಎಂಆರ್​ಪಿಎಲ್​​ನಲ್ಲಿ ಹೊರ ರಾಜ್ಯದವರಿಗೆ ಉದ್ಯೋಗ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಿ ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಯುವಕರಿಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊರಗಿನ ರಾಜ್ಯದವರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸುವುದು ಸರಿಯಲ್ಲ. ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು.

ಇದನ್ನೂ ಓದಿ: ಒಂದೇ ಕುಟುಂಬದ 18 ಮಂದಿಗೆ ಸೋಂಕು: ಕೊರೊನಾಗೆ ಸೆಡ್ಡು ಹೊಡೆದು ಗೆದ್ದ ಅವಿಭಕ್ತ ಕುಟುಂಬ

ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಸಚಿವ ಸದಾನಂದ ಗೌಡರು ಯುವಕರ ಹಿತರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ನಮ್ಮ ಶಾಸಕರ ನಿಧಿಯಿಂದ 100 ಕೋಟಿ ರೂ. ನಲ್ಲಿ ಲಸಿಕೆ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ. ಕೆಲವು ಕಂಪನಿಗಳ ಜತೆ ಮಾತನಾಡಿದ್ದೇವೆ. ಈಗಾಗಲೇ ಸರಕಾರದ ಮುಂದೆ ಕಾಂಗ್ರೆಸ್ ಪಕ್ಷ ಪ್ರಸ್ತಾವನೆ ಇಟ್ಟಿದೆ. ಸರಕಾರ ಒಪ್ಪಿಗೆ ನೀಡಿದರೆ ನಮ್ಮ ಬಳಿ ಇರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಇದಕ್ಕಾಗಿ ಉಪಯೋಗಿಸಲಿದ್ದೇವೆ. ಎಲ್ಲರಿಗೂ ವಾಕ್ಸಿನ್ ಒದಗಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದರು. ನ್ಯಾಚುರೋಪತಿ ವೈದ್ಯರ ಸಲಹೆ ಪಡೆಯುವ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಯುವ ಘಟಕದ ಅಭಿನಂದನ್ ಹಾಗೂ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.