ಬೆಳ್ತಂಗಡಿ: ನಮಗೆ ಭಗವಂತ ಕೊಟ್ಟ ಆದಾಯದಲ್ಲಿ ಒಂದಂಶವನ್ನು ಸಮಾಜದಲ್ಲಿ ಅಶಕ್ತರೆನಿಸಿದವರಿಗೆ ದಾನ ನೀಡುವುದು ಸೇವೆಯಲ್ಲ, ಅದು ಉಳ್ಳವರ ಸಾಮಾಜಿಕ ಜವಾಬ್ಧಾರಿ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ದಕ್ಷಿಣ ಕನ್ನಡದ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ವತಿಯಿಂದ ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ ಕ್ಯಾಂಪಸ್‌ನಲ್ಲಿ ನಡೆದ ಅರ್ಹ ಸರ್ವಧರ್ಮೀಯ 160 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಹಾಜಿ ಉಮರ್ ಕುಂಜ್ಙಿ ಮುಸ್ಲಿಯಾರ್ ಉದ್ಘಾಟಿಸಿದರು
ಸಮಾರಂಭದಲ್ಲಿ ತಾ. ಸಂಯುಕ್ತ ಜಮಾತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ಸಮಿತಿ ಉಪಾಧ್ಯಕ್ಷ ಉಮರ್ ಸಾಹೇಬ್, ಕಾರ್ಯಕ್ರಮ ಸಂಯೋಜಕ ಮುಬಾರಕ್ ಬಾರ್ಕೂರು, ಅನಿವಾಸಿ ಭಾರತೀಯ ಕರ್ನಾಟಕ ಫೋರಂ ಬಹರೈನ್ ಘಟಕದ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಇರ್ಷಾದ್, ಮಾಚಾರು ಜಮಾತ್ ಗೌರವಾಧ್ಯಕ್ಷ ಬಿ.ಎ. ಹಂಝ ಮೊದಲಾದ ಗಣ್ಯರು ಉಪಸ್ಥಿತರಿದ್ದರು.