ETV Bharat / state

ನಿರಂತರ 24 ಗಂಟೆಗಳ ಕಾರ್ಯಾಚರಣೆ: ಕಟೀಲು ದೇವಳದ ಬೃಹತ್ ವೃಕ್ಷಗಳ ಸ್ಥಳಾಂತರ ಯಶಸ್ವಿ - ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮರಗಳ ಸ್ಥಳಾಂತರ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ರಥ ಬೀದಿಯಲ್ಲಿದ್ದ, ಎರಡು ಬೃಹತ್ ಗಾತ್ರದ ಅಶ್ವತ್ಥ ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಲಾಯಿತು.

Katilu Sri Durgaparameshwari Temple
ರಥ ಬೀದಿಯಲ್ಲಿದ್ದ ಮರಗಳ ಸ್ಥಳಾಂತರ
author img

By

Published : Dec 31, 2019, 9:51 AM IST

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ರಥ ಬೀದಿಯಲ್ಲಿದ್ದ, ಎರಡು ಬೃಹತ್ ಗಾತ್ರದ ಅಶ್ವತ್ಥ ಮರಗಳನ್ನು ಸ್ಥಳಾಂತರ ಮಾಡಲಾಯಿತು. ರಸ್ತೆ ಅಗಲೀಕರಣ ಕಾಮಗಾರಿ ನಡೆಯುವುದರಿಂದ ಮರಗಳನ್ನು ಬುಡ ಸಮೇತ, ವೃಕ್ಷ ಪ್ರೇಮಿ ಜೀತ್ ಮಿಲನ್ ರೋಚ್ ನೇತೃತ್ವದಲ್ಲಿ ಸ್ಥಳಾಂತರಿಸಲಾಯಿತು.

ಮರವನ್ನು‌ 24 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, ಬೃಹತ್ ಗಾತ್ರದ ಟ್ರಕ್​ನಲ್ಲಿ ಸಿತ್ಲ ಬೈಲ್ ಎಂಬಲ್ಲಿಗೆ ಸ್ಥಳಾಂತರ ಮಾಡಲಾಯಿತು. ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಎರಡು ಮರಗಳಲ್ಲಿ ಒಂದು 65 ಟನ್ ಭಾರ ಹೊಂದಿದ್ದರೆ, ಮತ್ತೊಂದು 55 ಟನ್ ಭಾರ ಹೊಂದಿದೆ.

ರಥ ಬೀದಿಯಲ್ಲಿದ್ದ ಮರಗಳ ಸ್ಥಳಾಂತರ

ಸಿತ್ಲ ಬೈಲ್​ನಲ್ಲಿ ನೆಡಲಾಗಿರುವ ಈ ಎರಡೂ ಅಶ್ವತ್ಥ ಮರಗಳು, ಪೂರ್ತಿಯಾಗಿ ಮೊದಲಿನಂತಾಗಲು ಒಂದು ವರ್ಷ ಕಾಲವಾದರೂ ಬೇಕಾಗುತ್ತದೆ. ಸುಮಾರು ಆರು ತಿಂಗಳಲ್ಲಿ ಎಲೆಗಳು ಚಿಗುರೊಡೆಯುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಡೆಯಬೇಕಾದರೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಮರಗಳಿಗೆ ನೀರು ಹಾಕುವುದು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಜೀತ್ ಮಿಲನ್ ರೋಚ್, ಇದೇ ರೀತಿ ಸುಮಾರು 25ಕ್ಕೂ ಅಧಿಕ ಮರಗಳನ್ನು ಯಶಸ್ವಿ ಸ್ಥಳಾಂತರ ಕಾರ್ಯವನ್ನು ಮಾಡಿದ್ದು, ಅದರಲ್ಲಿ ಬೃಹತ್ ಗಾತ್ರದ 3 ಅಶ್ವತ್ಥ ಮರ ಹಾಗೂ 1 ಆಲದ ಮರವೂ ಸೇರಿದೆ. ಸ್ಥಳಾಂತರ ಕಾರ್ಯಕ್ಕೆ ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾರ್ಗದರ್ಶನ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಿದ್ದಾರೆ.

Intro:ಮಂಗಳೂರು: ನಗರದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿದ್ದ ಬೃಹತ್ ಗಾತ್ರದ ಅಶ್ವತ್ಥ ವೃಕ್ಷದ ಸ್ಥಳಾಂತರ ಕಾಮಗಾರಿ ಯಶಸ್ವಿಯಾಗಿ ನಡೆದಿದೆ. ದೇವಾಲಯದ ರಥಬೀದಿಯ ರಸ್ತೆ ಅಗಲೀಕರಣ ಕಾಮಗಾರಿ ನಡೆಸುವ ಉದ್ದೇಶದಿಂದ ಮರವನ್ನು ಕಡಿಯದೆ ಬುಡ ಸಮೇತ ಸ್ಥಳಾಂತರ ಮಾಡುವ ಬಲು ಅಪರೂಪದ ಕಾರ್ಯಾಚರಣೆ ನಡೆದಿದೆ.

ಈ ವೃಕ್ಷ ಸ್ಥಳಾಂತರವು ಕಾಮಗಾರಿಯು ವೃಕ್ಷ ಪ್ರೇಮಿ ಜೀತ್ ಮಿಲನ್ ರೋಚ್ ರವರ ನೇತೃತ್ವದಲ್ಲಿ 24 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ಯಶಸ್ವಿಯಾಗಿ ನಡೆಯಿತು.

ದೇವಾಲಯದ ರಥಬೀದಿಯಲ್ಲಿರುವ ಶಾಲೆಯ ಸರಸ್ವತೀ ಸದನದ ಬಳಿಯಿರುವ ನೂರಾರು ವರ್ಷಗಳ ಹಳೆಯ ಅಶ್ವತ್ಥ ವೃಕ್ಷಗಳು ಕ್ರೇನ್, ಹಿಟಾಚಿ ಬಳಸಿ ಸ್ಥಳಾಂತರ ಮಾಡಲಾಯಿತು. ದೇವಾಲಯದ ಪರಿಸರ ಇಕ್ಕಟ್ಟಿನಿಂದ ಕೂಡಿದ್ದು, ಬಹಳ ಸವಾಲಿನಿಂದ ಕೂಡಿರುವ ಈ ಮರವನ್ನು‌ ಬಹಳ ಜಾಗರೂಕತೆಯಿಂದ ಬುಡ ಸಮೇತ ದೇವಾಲಯದ ಆಡಳಿಕ್ಕೊಳಪಡುವ ಸಿತ್ಲಬೈಲ್ ಎಂಬಲ್ಲಿಗೆ ಸ್ಥಳಾಂತರ ಮಾಡಲಾಯಿತು. ಈ ಎರಡು ಅಶ್ವತ್ಥ ವೃಕ್ಷದಲ್ಲಿ ಇಂದು 65 ಟನ್ ಭಾರ ಹೊಂದಿದ್ದರೆ ಮತ್ತೊಂದು 55 ಟನ್ ಭಾರ ಹೊಂದಿದ್ದು, ಬೃಹತ್ ಗಾತ್ರದ ಟ್ರಕ್ ಬಳಸಿ ಸಾಗಿಸಲಾಯಿತು. ಈ ಸಂದರ್ಭ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

Body:ವೃಕ್ಷ ಸ್ಥಳಾಂತರ ಕ್ರಿಯಾಯೋಜನೆಯ ರೂವಾರಿ ಜೀತ್ ಮಿಲನ್ ರೋಚ್ ಅಲ್ಲದೆ ಕೇವಲ ಕ್ರೇನ್ ಅಪರೇಟರ್, ಟ್ರಕ್ ಚಾಲಕರು ಸೇರಿ ಕೇವಲ 7-8 ಮಂದಿಯಿಂದ ಈ ವೃಕ್ಷ ಸ್ಥಳಾಂತರ ಕಾರ್ಯ ನಡೆದಿರೋದು ಅಚ್ಚರಿಯೇ ಸರಿ.

ಸಿತ್ಲ ಬೈಲಿನಲ್ಲಿ ನೆಡಲಾಗಿರುವ ಈ ಎರಡೂ ಅಶ್ವತ್ಥ ವೃಕ್ಷಗಳು ಪೂರ್ತಿಯಾಗಿ ಮೊದಲಿನಂತಾಗಲು ಕನಿಷ್ಠ ಪಕ್ಷ ಒಂದು ವರ್ಷಗಳ ಕಾಲವಾದರೂ ಬೇಕಾಗುತ್ತದೆಯಂತೆ. ಸುಮಾರು ಆರು ತಿಂಗಳಲ್ಲಿ ಎಲೆಗಳು ಚಿಗುರು ಬರುವ ಸಾಧ್ಯತೆ ಇದೆಯಂತೆ. ಈ ಪ್ರಕ್ರಿಯೆ ನಡೆಯಬೇಕಾದರೆ ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಎರಡೂ ಹೊತ್ತು ಮರಗಳಿಗೆ ನೀರುಣಿಸೋದು ಅಗತ್ಯವಂತೆ.

ಜೀತ್ ಮಿಲನ್ ರೋಚ್ ಅವರು, ಈ ರೀತಿಯಲ್ಲಿ ಸುಮಾರು 25ಕ್ಕೂ ಅಧಿಕ ಮರಗಳನ್ನು ಯಶಸ್ವಿ ಸ್ಥಳಾಂತರ ಕಾರ್ಯವನ್ನು ಮಾಡಿದ್ದು, ಅದರಲ್ಲಿ ಬೃಹತ್ ಗಾತ್ರದ 3 ಅಶ್ವತ್ಥ ವೃಕ್ಷ, 1 ಆಲದ ಮರವೂ ಸೇರಿದೆಯಂತೆ.

ಕಟೀಲು ದೇವಾಲಯದ ಅಶ್ವತ್ಥ ವೃಕ್ಷ ಸ್ಥಳಾಂತರ ಕಾರ್ಯಕ್ಕೆ ದೇವಳದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾರ್ಗದರ್ಶನ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.