ಬೆಳ್ತಂಗಡಿ: ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ( 60) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಇಂದು ಬೆಳಗ್ಗೆ 7:30ರ ವೇಳೆ ಕಚೇರಿಗೆ ಬಂದು ಸ್ವಲ್ಪ ಕೆಲಸ ಮಾಡಿದ್ದರು. ಆದರೆ, ಮಧ್ಯಾಹ್ನ ಸಂಘದ ಅಟಲ್ ಜೀ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತರು ಈ ತಿಂಗಳ ಕೊನೆಗೆ ನಿವೃತ್ತಿಯಾಗುವವರಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಓದಿ: ಚಾಮರಾಜನಗರದಲ್ಲಿ ಮತ್ತೊಂದು ಎಡವಟ್ಟು: ಬದುಕಿದ್ದ ಸೋಂಕಿತೆಯನ್ನೇ ಸತ್ತಿದ್ದಾರೆ ಎಂದ ಸಿಬ್ಬಂದಿ