ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅ. 17 ರಿಂದ24 ರವರೆಗೆ ಸರ್ಕಾರದ ಕೊರೊನಾ ನಿಯಮಾವಳಿಯಂತೆ ನವರಾತ್ರಿ ಉತ್ಸವ ನಡೆಯಲಿದೆ.
ನವರಾತ್ರಿ ಉತ್ಸವದ ಆಚರಣೆ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೇವಸ್ಥಾನದ ಎದುರಿರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6 ರಿಂದ 8ರವರೆಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮಗಳ ವಿವರ :
ಅ. 17ರಂದು ಕುಮಾರಿ ಸಾನ್ವಿ ಶೆಟ್ಟಿ ಬೆಂಗಳೂರು ಇವರಿಂದ ಸುಗಮ ಸಂಗೀತ,
ಅ18 ರಂದು ಶ್ರೀಮತಿ ಸುನಿತಾ ಶ್ರೀಪಾದ್ ರಾವ್, ಸಾಗರ ಇವರಿಂದ ಸುಗಮಸಂಗೀತ,
ಅ.19 ರಂದು ಕುಮಾರಿ ಅಖಿಲ ಪಜಿಮಣ್ಣು ಪುತ್ತೂರು ಇವರ ಸುಗಮ ಸಂಗೀತ,
ಅ.20 ಕುಮಾರಿ ದೀಕ್ಷಾ ದೇವಾಡಿಗ ಅಲೆವೂರು ಉಡುಪಿ ಇವರಿಂದ ಸ್ಯಾಕ್ಸೋಪೋನ್ ವಾದನ ಕಾರ್ಯಕ್ರಮ,
ಅ.21 ಕುಮಾರಿ ಪ್ರಸೀದಾ ಮತ್ತು ಬಳಗ ಧರ್ಮಸ್ಥಳ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ,
ಅ.22ರಂದು ಚಂದ್ರಶೇಖರ ಹೆಗ್ಡೆ ಪುತ್ತೂರು ಇವರಿಂದ ಸುಗಮ ಸಂಗೀತ,
ಅ.23 ಶ್ರೀಮತಿ ಶ್ರೀದೇವಿ ಮತ್ತು ಬಳಗ ಧರ್ಮಸ್ಥಳ ಇವರಿಂದ ಶಾಸ್ತ್ರೀಯ ಸಂಗೀತ,
ಅ.24 ಕುಮಾರಿ ಸಾಧ್ವಿನಿ ಕೊಪ್ಪ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿವೆ.