ಬಂಟ್ವಾಳ: ಕೊರೊನಾ ನಿವಾರಣೆಗಾಗಿ ತಾಲೂಕಿನ ದಡ್ಡಲಕಾಡುವಿನ ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರೆಂಕಿಯ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಧನ್ವಂತರಿ ಯಾಗ ನಡೆಸಲಾಯಿತು.
ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಕ್ಕೆ ಕೊರೊನಾ ವಾರಿಯರ್ಸ್ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇಂದು ತಾಲೂಕಿನ ಕರೆಂಕಿಯ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಧನ್ವಂತರಿ ಯಾಗ ನಡೆಸಲಾಯಿತು.
ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಗುರುರಾಜ್ ಭಟ್ ಮತ್ತು ಬಳಗದ ಪೌರೋಹಿತ್ಯದಲ್ಲಿ ಯಾಗ ನಡೆದಿದ್ದು, ಭಕ್ತರು ಭಾಗವಹಿಸಿದ್ದರು.