ETV Bharat / state

ಬಂಟ್ವಾಳದಲ್ಲಿ ಗಾಂಜಾ ಮಾರಾಟ: ನಾಲ್ವರ ಬಂಧನ - selling marijuana

ಲಾಕ್‌ಡೌನ್ ಮಧ್ಯೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಟ್ವಾಳ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Detention of those selling marijuana
ಬಂಟ್ವಾಳದಲ್ಲಿ ಗಾಂಜಾ ಮಾರಾಟ
author img

By

Published : Apr 10, 2020, 11:56 AM IST

ಬಂಟ್ವಾಳ (ದ.ಕ): ಮೊಡಂಕಾಪು ಸಮೀಪ ಪಲ್ಲಮಜಲಿನಲ್ಲಿ ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ಪೊಲೀಸರ ತಂಡ ಗುರುವಾರ ಬಂಧಿಸಿದೆ.

ಸ್ಥಳೀಯ ನಿವಾಸಿಗಳಾದ ಅಲ್ತಾಫ್ (24), ಅಬ್ದುಲ್ ರಝಾಖ್ (28), ಸಲ್ಮಾನ್ (26) ಮತ್ತು ಪ್ರೀತಮ್ ಮೇನೆಜಸ್ (24) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಪೊಲೀಸರು ದಾಳಿ ನಡೆಸಿದ್ದು, ಸುಮಾರು 170 ಗ್ರಾಂ ಗಾಂಜ, ಒಂದು ಆಟೋರಿಕ್ಷಾ, ಒಂದು ಮೋಟಾರು ವಾಹನವನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.