ETV Bharat / state

ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ - ಫರಂಗಿಪೇಟೆ

ವಾರದ ಅವಧಿಯಲ್ಲಿ ಬಂಟ್ವಾಳ ಮತ್ತು ಮೇಲ್ಕಾರ್​ನಲ್ಲಿ ಭೀಕರ ಹತ್ಯೆ ಘಟನೆಗಳು ಇನ್ನೂ ಹಸಿಯಾಗಿರುವಂತೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಮತ್ತೊಂದು ತಲ್ವಾರ್​ ದಾಳಿ ಸಂಭವಿಸಿದೆ. ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಗುಂಪೊಂದು ಮಾರಣಾಂತಿಕ ದಾಳಿ ನಡೆಸಿದೆ.

ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ
ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ
author img

By

Published : Oct 28, 2020, 9:38 PM IST

ಬಂಟ್ವಾಳ: ಫರಂಗಿಪೇಟೆಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಶಾ ಸ್ಟುಡಿಯೋ ಮಾಲೀಕ, ಬಿಜೆಪಿ ಪುದು ಶಕ್ತಿ ಕೇಂದ್ರದ ಸಾಮಾಜಿಕ ಜಾಲ ತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಮೇಲೆ ದುಷ್ಕರ್ಮಿಗಳು ತಲವಾರ್​ನಿಂದ ದಾಳಿ ನಡೆಸಿದ್ದಾರೆ.

ರಾತ್ರಿ ಸುಮಾರು 7.50 ರ ಸುಮಾರಿಗೆ ಕಟ್ಟಡದ ಮೊದಲ ಮಹಡಿಯಲ್ಲಿರುವ ಅವರ ಸ್ಟುಡಿಯೋಗೆ ನುಗ್ಗಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿ ರಾತ್ರಿ ವೇಳೆ ಅವರ ಸ್ಟುಡಿಯೋ ಮಾತ್ರ ತೆರೆದಿದ್ದು, ಈ ಸಂದರ್ಭದಲ್ಲಿ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಿಂದ ಅವರ ತಲೆ, ಹೊಟ್ಟೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ದಿನೇಶ್ ಕೊಟ್ಟಿಂಜ ಅವರು ಪೊಟೋಗ್ರಾಫರ್ ಆಗಿರುವುದರ ಜೊತೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಪತ್ತೆಗಾಗಿ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆದಿದ್ದು, ಎಲ್ಲೆಡೆ ನಾಕಾಬಂಧಿ ಹಾಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.