ETV Bharat / state

ಮಾತು ಉಳಿಸಿಕೊಂಡ ಡಿಸಿಎಂ ಲಕ್ಷ್ಮಣ ಸವದಿ: ಕಂಬಳಕ್ಕೆ ದೇಣಿಗೆ

ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು 11 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಚೆಕ್​ ನೀಡುವ ಮೂಲಕ ಮಾತನ್ನು ಉಳಿಸಿಕೊಂಡಿದ್ದಾರೆ.

author img

By

Published : Feb 16, 2021, 9:25 PM IST

DCM Laxman Savadhi donate money to kambala
ಕಂಬಳದಂದು ಘೋಷಿಸಿದ 11 ಲಕ್ಷ ರೂ. ದೇಣಿಗೆ ನೀಡಿದ ಡಿಸಿಎಂ ಸವದಿ

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೂ. 11 ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆಯನ್ನು ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರಿಗೆ ಚೆಕ್ ಮೂಲಕ ನೀಡಿದ್ದಾರೆ.

ಜ.31ರಂದು ನಡೆದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಅಂದು ಮಾತನಾಡಿದ್ದ ಸವದಿ, ಕಂಬಳಕ್ಕೆ ರೂ. 11 ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದರು.

ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿ ಸರ್ಕಾರದಿಂದಲೂ ಜಿಲ್ಲೆಯ ಎಲ್ಲಾ ಕಂಬಳಗಳಿಗೆ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಅವರು ಭರವಸೆ ನೀಡಿ ಕೇವಲ 2 ವಾರದೊಳಗೆ ದೇಣಿಗೆ ಚೆಕ್ ಹಸ್ತಾಂತರಿಸಿರುವುದು ಇಲ್ಲಿನ ಕಂಬಳಾಸಕ್ತರಲ್ಲಿ ಮತ್ತಷ್ಟು ಸಂತಸಕ್ಕೆ ಕಾರಣವಾಗಿದೆ.

ಓದಿ: ಕೈಗಾರಿಕೆಗಳ ಸ್ಥಾಪನೆಗೆ ಮುಂದಾದ ಕದಂಬ ನೌಕಾ ನೆಲೆ : ಯುವಕರಿಗೆ ಉದ್ಯೋಗದ ನಿರೀಕ್ಷೆ

ಗ್ರಾಮೀಣ ಕೃಷಿಕರನ್ನು ಹೊಂದಿರುವ ಹೊಕ್ಕಾಡಿಗೋಳಿ ಕಂಬಳ ಕೆರೆಗೆ ಹೊಸ ರೂಪ ನೀಡುವುದರ ಜೊತೆಗೆ ವಿವಿಧ ಮೂಲಸೌಕರ್ಯ ಒದಗಿಸಿ, ವೀಕ್ಷಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಗ್ಯಾಲರಿ ನಿರ್ಮಿಸಲು ಸ್ಥಳೀಯ ಸ್ಥಳದಾನಿಗಳ ಜೊತೆಗೆ ಮಾತುಕತೆ ನಡೆಸಿದ ಬಳಿಕ ಕಂಬಳ ಸಮಿತಿ ಮುನ್ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ಪಷ್ಟನೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.