ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಜಪ್ಪುನಮೊಗರು, ಕಲ್ಲಾಪು, ಎಕ್ಕೂರು ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳು ಜಲಾವೃತಗೊಂಡಿದೆ. ಈ ಪ್ರದೇಶಗಳಿಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ತಡರಾತ್ರಿ ಈ ವಸತಿ ಸಮುಚ್ಚಯ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಫ್ಲ್ಯಾಟ್ ಗಳ ತಳ ಅಂತಸ್ತು ಸಂಪೂರ್ಣ ಜಲಾವೃತಗೊಂಡಿತ್ತು. ಅಗ್ನಿಶಾಮಕದಳ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ದೋಣಿಗಳ ಸಹಾಯದಿಂದ ವೃದ್ಧರು, ಮಕ್ಕಳು ಸೇರಿ 10 ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.
![dakshin kannda dc visits to flooded areas](https://etvbharatimages.akamaized.net/etvbharat/prod-images/kn-mng-04-dc-visit-script-ka10015_11092020211227_1109f_1599838947_884.jpg)