ETV Bharat / state

ಸರ್ಜಿಕಲ್ ಗ್ಲೌಸ್ ಕಳುಹಿಸುವುದಾಗಿ 2.68 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮರು - ಮಂಗಳೂರಿನಲ್ಲಿ ಮೆಡಿಕಲ್​ ಶಾಪ್​ ಮಾಲೀಕನಿಗೆ ಸೈಬರ್​ ಕಳ್ಳರಿಂದ ವಂಚನೆ,

ಮೆಡಿಕಲ್​ ಶಾಪ್​ ಮಾಲೀಕನಿಗೆ ಸರ್ಜಿಕಲ್ ಗ್ಲೌಸ್ ಕಳುಹಿಸುವುದಾಗಿ 2.68 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

cyber cheaters fraud, cyber cheaters fraud to medical owner, cyber cheaters fraud to medical owner in Mangalore, ಸೈಬರ್​ ಕಳ್ಳರಿಂದ ವಂಚನೆ, ಮೆಡಿಕಲ್​ ಶಾಪ್​ ಮಾಲೀಕನಿಗೆ ಸೈಬರ್​ ಕಳ್ಳರಿಂದ ವಂಚನೆ, ಮಂಗಳೂರಿನಲ್ಲಿ ಮೆಡಿಕಲ್​ ಶಾಪ್​ ಮಾಲೀಕನಿಗೆ ಸೈಬರ್​ ಕಳ್ಳರಿಂದ ವಂಚನೆ,  ಮಂಗಳೂರು ಸುದ್ದಿ,
ಸರ್ಜಿಕಲ್ ಗ್ಲೌಸ್ ಕಳುಹಿಸುವುದಾಗಿ 2.68 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮರು
author img

By

Published : Jun 17, 2021, 4:48 AM IST

ಮಂಗಳೂರು: ಸರ್ಜಿಕಲ್ ಗ್ಲೌಸ್ ಕಳುಹಿಸಿಕೊಡಲಾಗುತ್ತದೆ ಎಂದು 2,68,800 ರೂ. ಪಡೆದು ಬಳಿಕ ವಂಚಿಸಿದ ಆರೋಪದ ಮೇಲೆ ವ್ಯಕ್ತಿ ಮೇಲೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನ ಅತ್ತಾವರದಲ್ಲಿ ಕರ್ನಾಟಕ ಡೆಂಟಲ್ ಆ್ಯಂಡ್​ ಸರ್ಜಿಕಲ್ ಎಂಬ ಸರ್ಜಿಕಲ್ ಮಾರಾಟದ ಮಳಿಗೆಯ ವ್ಯಾಟ್ಸ್ಆ್ಯಪ್ ಸಂಖ್ಯೆಗೆ ಏಪ್ರಿಲ್ 22ರಂದು ಸಂಜೆ 4 ಗಂಟೆಗೆ ಓಂ ಸಾಯಿ ಎಂಟರ್ ಪ್ರೈಸಸ್ ಕಂಪನಿಯಿಂದ 1 ಬಾಕ್ಸ್ ಗ್ಲೌವ್ಸ್​ಗೆೆ ರೂ.358.4 ರಂತೆ ಒಟ್ಟು 750 ಬಾಕ್ಸ್​ಗೆ ರೂ. 2,68,800 ಕೊಡುವುದಾಗಿ ಆಫರ್ ಬಂದಿದೆ.

cyber cheaters fraud, cyber cheaters fraud to medical owner, cyber cheaters fraud to medical owner in Mangalore, ಸೈಬರ್​ ಕಳ್ಳರಿಂದ ವಂಚನೆ, ಮೆಡಿಕಲ್​ ಶಾಪ್​ ಮಾಲೀಕನಿಗೆ ಸೈಬರ್​ ಕಳ್ಳರಿಂದ ವಂಚನೆ, ಮಂಗಳೂರಿನಲ್ಲಿ ಮೆಡಿಕಲ್​ ಶಾಪ್​ ಮಾಲೀಕನಿಗೆ ಸೈಬರ್​ ಕಳ್ಳರಿಂದ ವಂಚನೆ,  ಮಂಗಳೂರು ಸುದ್ದಿ,
ಸರ್ಜಿಕಲ್ ಗ್ಲೌಸ್ ಕಳುಹಿಸುವುದಾಗಿ 2.68 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮರು

ಇದನ್ನು ನಂಬಿದ ಅಂಗಡಿ ಮಾಲೀಕ ಅದೇ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ್ದಾರೆ‌. ಆಗ ಮುಂಗಡ ಹಣ ನೀಡಿ ನಿಮ್ಮ ವಸ್ತುಗಳನ್ನು ಕಳುಹಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಮರುದಿನ ಓಂ ಸಾಯಿ ಎಂಟರ್ ಪ್ರೈಸಸ್​ನ ಐ.ಡಿ.ಎಫ್.ಸಿ ಖಾತೆಗೆ ನೆಟ್ ಬ್ಯಾಂಕಿಂಗ್ ಮೂಲಕ 25 ಸಾವಿರ ರೂ. ಕಳುಹಿಸಲಾಗಿತ್ತು.

ಏಪ್ರಿಲ್ 24ರಂದು ಮತ್ತೆ 1,09,400 ರೂ. ಹಣ ಕಳುಹಿಸಿದರೂ ಸರ್ಜಿಕಲ್ ಗ್ಲೌವ್ಸ್ ಬಾರದೇ ಇದ್ದುದರಿಂದ ಕರೆ ಮಾಡಿ ವಿಚಾರಿಸಿದಾಗ ಪೂರ್ತಿ ಹಣವನ್ನು ವರ್ಗಾಯಿಸುವಂತೆ ತಿಳಿಸಲಾಗಿದೆ. ಆದರೆ ಪೂರ್ತಿ ಹಣ ಕಳುಹಿಸಿದ ಬಳಿಕ ಪೋನ್ ಮಾಡಿದಾಗ ದೂರುದಾರರ ಪೋನ್ ನಂಬರ್​ವನ್ನು ಬ್ಲಾಕ್ ಮಾಡಿ ವಂಚನೆ ಮಾಡಲಾಗಿದೆ ಎಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.