ಮಂಗಳೂರು:ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವನಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.
ಇಂದು ಬೆಳಗ್ಗೆ ತೆರೆಯಲಾದ ಮಾರುಕಟ್ಟೆಗೆ ತುಸು ಹೆಚ್ಚಾಗಿಯೇ ಜನದಟ್ಟಣೆ ನೆರೆದಿತ್ತು. ಎರಡು ದಿನದಿಂದ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದರು.
ಹಿಂಸಾಚಾರ, ಕಲ್ಲುತೂರಾಟ, ಗದ್ದಲ ಕೂಗಾಟಗಳಿಂದ ಕೂಡಿದ್ದ ಮಂಗಳೂರು ಶಾಂತವಾಗಿದೆ. ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೃತಪಟ್ಟ ಇಬ್ಬರು ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.