ETV Bharat / state

ಮೇಯಲು ಬಿಟ್ಟ ಗೋವುಗಳ ಮಾರಾಟಕ್ಕೆ ಯತ್ನ - cow shipping case of kadaba

ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಖದೀಮರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಂಜೋಡಿಯ ಗಂಗಾಧರ, ಪುರುಷೋತ್ತಮ, ಕೀರ್ತಿ ಬೊಮ್ಮನಹಳ್ಳಿ, ಹೇಮಂತ್ ಕುಮಾರ್ ಚಿನ್ನಳ್ಳಿ, ಯಧುಕುಮಾರ್ ಚಿನ್ನಳ್ಳಿ, ಆನಂದ ಬಂಧಿತ ಆರೋಪಿಗಳು.

Cow shipping case of kadaba: 6 arrested
ಕಡಬ: ಜಾನುವಾರು ಸಾಗಾಟ ತಡೆದ ಸಾರ್ವಜನಿಕರು, 6 ಮಂದಿಯ ಬಂಧನ!
author img

By

Published : Oct 3, 2020, 7:16 AM IST

Updated : Oct 3, 2020, 9:19 AM IST

ಕಡಬ: ಮರ್ದಾಳ ಸಮೀಪದ ಕೆರ್ಮಾಯಿ ಎಂಬಲ್ಲಿಂದ ಮೇಯಲು ಬಿಡುತ್ತಿರುವ ಜಾನುವಾರುಗಳನ್ನು ಸಕಲೇಶಪುರ, ಹಾಸನ ಮೂಲದವರಿಗೆ ಕದ್ದು ಮಾರಾಟ ಮಾಡುವ ಘಟನೆ ನಡೆಯುತ್ತಿದ್ದು, ನಿನ್ನೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಖದೀಮರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾನುವಾರು ಸಾಗಾಟ ತಡೆದ ಸಾರ್ವಜನಿಕರು

ಕಡಬ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಎಫ್​​ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪಂಜೋಡಿಯ ಗಂಗಾಧರ, ಪುರುಷೋತ್ತಮ, ಕೀರ್ತಿ ಬೊಮ್ಮನಹಳ್ಳಿ, ಹೇಮಂತ್ ಕುಮಾರ್ ಚಿನ್ನಳ್ಳಿ, ಯಧುಕುಮಾರ್ ಚಿನ್ನಳ್ಳಿ, ಆನಂದ ಬಂಧಿತ ಆರೋಪಿಗಳು.

Cow shipping case of kadaba: 6 arrested
ಜಾನುವಾರು ಸಾಗಾಟ ತಡೆದ ಸಾರ್ವಜನಿಕರು

ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಓರ್ವ ವ್ಯಕ್ತಿಯೇ ಈ ಹೇಯ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಘಟನೆ ಇಲ್ಲಿನ ಹಿಂದೂ ಸಂಘಟನೆ ಮುಖಂಡರು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿ ಈ ಬಗ್ಗೆ ಸ್ಥಳೀಯರೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಸ್ಥಳಕ್ಕಾಗಮಿಸಿದರು. ಆ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಉದ್ವಿಗ್ನ ವಾತಾವರಣ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದರು.

Last Updated : Oct 3, 2020, 9:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.