ಬೆಳ್ತಂಗಡಿ : ದೇಶದ ಹಲವೆಡೆ ಕೋವಿಡ್ ಪ್ರಮಾಣ ಕೊಂಚ ಮಟ್ಟಿಗೆ ತಗ್ಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಸೋಂಕಿನ ಪ್ರಮಾಣ ಇನ್ನೂ ಇಳಿಕೆ ಕಂಡಿಲ್ಲ. ತಾಲೂಕಿನ ಲಾಯಿಲ ಗ್ರಾಮದ ಕನ್ನಾಜೆ ಬಡಾವಣೆಯೊಂದರಲ್ಲಿ 28 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.
ಸೋಂಕಿತರನ್ನು ಸಿಸಿಸಿಗೆ ಶಿಫ್ಟ್
ಕನ್ನಾಜೆ ಬಡಾವಣೆಯ ಸೋಂಕಿತರನ್ನು ಲಾಯಿಲ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ 50 ಮನೆಗಳಿದ್ದು, ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೇ ಸೋಂಕಿತರನ್ನು ಶಾಸಕರ ಕಚೇರಿಯ ಶ್ರಮಿಕ ಸ್ಪಂದನಾ ಆ್ಯಂಬುಲೆನ್ಸ್ ಮೂಲಕ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ:COVID 3rd Wave: ಐಸಿಎಂಆರ್ನಿಂದ ಗುಡ್ ನ್ಯೂಸ್
ಕೋವಿಡ್ ಕೇರ್ ಕೇಂದ್ರಕ್ಕೆ ಹೋಗಲು ಕೆಲವರು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳು ಅವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.