ETV Bharat / state

ಮೈದಾನದಲ್ಲಿ ಮನೆ ನಿರ್ಮಾಣಕ್ಕೆ ವಿರೋಧ: ಸ್ಥಳೀಯರೊಂದಿಗೆ ಕಾರ್ಪೋರೇಟರ್ ಪತಿ ಕಿರಿಕ್ - etv bharat kannada

ಮೈದಾನದಲ್ಲಿ ಮನೆ ನಿರ್ಮಾಣವಾಗುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಕಾರ್ಪೋರೇಟರ್ ಸಂಗೀತ ನಾಯಕ್ ಹೇಳಿದ್ದಾರೆ.

corporator-husband-kirik-video-viral
ಮಂಗಳೂರು:ಮೈದಾನದಲ್ಲಿ ಮನೆ ನಿರ್ಮಾಣಕ್ಕೆ ವಿರೋಧ... ಸ್ಥಳೀಯರೊಂದಿಗೆ ಕಾರ್ಪೋರೇಟರ್ ಪತಿಯ ಕಿರಿಕ್
author img

By

Published : Dec 15, 2022, 3:31 PM IST

ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನ ಕಬಳಿಸುವ ಯತ್ನ ನಡೆದಿದೆ ಎಂದು ಪಚ್ಚನಾಡಿಯ ಸ್ಥಳೀಯರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪತಿ ಸ್ಥಳೀಯರನ್ನು ದಬಾಯಿಸಿರುವ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆಯಿತು. ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಪತಿ ಮತ್ತು ಸ್ಥಳೀಯರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಎರಡೆಕರೆ ಸರ್ಕಾರಿ ಜಾಗವನ್ನು ಆಟದ ಮೈದಾನ ಮಾಡಲಾಗಿತ್ತು. ಇದೀಗ ಆ ಜಾಗದಲ್ಲಿ ಏಕಾಏಕಿ ಅಕ್ರಮ ಮನೆ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ. ಸರ್ಕಾರಿ ಜಾಗ ಕಬಳಿಸುವ ಯತ್ನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕಾಗಮಿಸಿದ ಕಾರ್ಪೊರೇಟರ್ ಪತಿ ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಮೈದಾನವಾಗಿಯೇ ಉಳಿಸುವ ಭರವಸೆಯನ್ನು ಕಾರ್ಪೋರೇಟರ್ ಸಂಗೀತ ನೀಡಿದರು. ಮನೆ ನಿರ್ಮಾಣವಾಗುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದೂ ಹೇಳಿದರು.

ಇದನ್ನೂ ಓದಿ: ಪೊಲೀಸ್​ ಚೌಕಿಯಲ್ಲಿ ಯಾರೂ ಇಲ್ಲ, ಮೇಜು ಹತ್ತಿ ಯುವಕನಿಂದ ಬೋಜ್​ಪುರಿ ಡ್ಯಾನ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.