ETV Bharat / state

ಕೊರೊನಾ ಭೀತಿ: ಬೆಳ್ತಂಗಡಿಯ ಒಂದೇ ಕುಟುಂಬದ 9 ಮಂದಿಗೆ ಹೋಮ್​ ಕ್ವಾರಂಟೈನ್​ - Home Quarantine

ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೈಕೆ ಮಾಡಿದ್ದ ನರ್ಸ್​ವೊಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪುವಿನಲ್ಲಿದ್ದು, ಅವರು ಗಂಡನ ಮನೆಗೆ ಬಂದು ಹೋಗಿದ್ದರು. ಹಾಗಾಗಿ ಆ ಕುಟುಂಬದ 9 ಜನರನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ಹೋಮ್ ಕ್ವಾರಂಟೈನ್
ಹೋಮ್ ಕ್ವಾರಂಟೈನ್
author img

By

Published : Apr 22, 2020, 9:56 PM IST

ಬೆಳ್ತಂಗಡಿ: ಬಂಟ್ವಾಳದಲ್ಲಿ ಕೊರೊನಾ ಸೋಂಕಿನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಕುಟುಂಬದ ಮಕ್ಕಳು ಸೇರಿದಂತೆ 9 ಮಂದಿಯನ್ನು ವೈದ್ಯರ ತಂಡ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೈಕೆ ಮಾಡಿದ್ದ ನರ್ಸ್​ವೊಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪುವಿನಲ್ಲಿದ್ದು, ಅವರು ಗಂಡನ ಮನೆಗೆ ಬಂದು ಹೋಗಿದ್ದರು.

ಇದೀಗ ಸೋಂಕಿತ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ನರ್ಸ್​ಅನ್ನು ಬಂಟ್ವಾಳದಲ್ಲೇ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇತ್ತ ನರ್ಸ್ ಬಂದು ಹೋದ ಪತಿಯ ಮನೆಯ 9 ತಿಂಗಳ ಮಗು, ಮೂರು ಮಂದಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.