ETV Bharat / state

ಕೊರೊನಾ ಜೊತೆ ಡೆಂಘೀ, ಮಲೇರಿಯಾ.. 24 ಗಂಟೆಯೊಳಗೆ ಕೊರೊನಾ ವರದಿಗೆ ತೀರ್ಮಾನ.. - Dr. naveenchandra latest news

ಬಲ್ನಾಡು ಗ್ರಾಮದ 15 ಶಂಕಿತ ಡೆಂಘೀ ಪ್ರಕರಣಗಳು ದಾಖಲಾಗಿದೆ. ಪಾಣಾಜೆ, ತಿಂಗಳಾಡಿ, ಕಡಬ, ಉಪ್ಪಿನಂಗಡಿ ಭಾಗದಲ್ಲಿಯೂ ಡೆಂಘೀ ಶಂಕಿತ ಪ್ರಕರಣ ಕಂಡು ಬಂದಿವೆ. ಕೊರೊನಾ, ಡೆಂಘೀ ಹಾಗೂ ಮಲೇರಿಯಾ ಒಟ್ಟಾಗಿ ಬಂದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

corona
ಕೊರೊನಾ ಜೊತೆ ಡೆಂಗ್ಯೂ, ಮಲೇರಿಯಾ
author img

By

Published : May 6, 2020, 3:58 PM IST

ಪುತ್ತೂರು : ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘೀ ಪ್ರಕರಣ ದಾಖಲಾಗಿವೆ. ಹಾಗಾಗಿ 24 ಗಂಟೆಯೊಳಗೆ ಕೊರೊನಾ ಸೋಂಕಿನ ಪ್ರಕರಣಗಳ ಪಾಸಿಟಿವ್-ನೆಗೆಟಿವ್ ವರದಿ ನೀಡಲಾಗುವುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ತಿಳಿಸಿದರು.

ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಮತ್ತು ಖಾಸಗಿ ವೈದ್ಯರಿಗೆ ಡೆಂಘೀ, ಮಲೇರಿಯಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಈಗಾಗಲೇ ಒಂದು ಡೆಂಘೀ ಪ್ರಕರಣ ದಾಖಲಾಗಿದೆ. 20 ಮಂದಿ ಶಂಕಿತ ಡೆಂಘೀ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಲ್ನಾಡು ಗ್ರಾಮದ 15 ಶಂಕಿತ ಡೆಂಘೀ ಪ್ರಕರಣಗಳು ದಾಖಲಾಗಿದೆ. ಪಾಣಾಜೆ, ತಿಂಗಳಾಡಿ, ಕಡಬ, ಉಪ್ಪಿನಂಗಡಿ ಭಾಗದಲ್ಲಿಯೂ ಡೆಂಘೀ ಶಂಕಿತ ಪ್ರಕರಣ ಕಂಡು ಬಂದಿವೆ. ಕೊರೊನಾ, ಡೆಂಘೀ ಹಾಗೂ ಮಲೇರಿಯಾ ಒಟ್ಟಾಗಿ ಬಂದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನತೆ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ ಎಂದರು.

ಕೊರೊನಾ ಜೊತೆ ಡೆಂಘೀ,ಮಲೇರಿಯಾ..

ಅಡಿಕೆ ತೋಟಗಳಿಂದ ಹರಡುತ್ತಿದೆ ಡೆಂಘೀ : ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ವರ್ಗ ಹೆಚ್ಚಾಗಿದೆ. ಇದೀಗ ಪುತ್ತೂರು ತಾಲೂಕಿನ ವಿವಿಧ ಭಾಗದಲ್ಲಿ ಶಂಕಿತ ಡೆಂಘೀ ಪ್ರಕರಣ ಹರಡಲು ಅಡಿಕೆ ತೋಟಗಳೇ ಕಾರಣವಾಗುತ್ತಿದೆ. ಅಡಿಕೆ ಸೋಗೆ ಕಡಿದು ಹಾಕಿದ ಅಡಿಕೆ ಮರ, ತೆಂಗಿನ ಮರದ ಬುಡಗಳಲ್ಲಿ ಈ ರೋಗಕ್ಕೆ ಕಾರಣವಾಗುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ.

ರೈತರು ಅಡಕೆ ತೋಟಕ್ಕೆ ಹೋಗುವಾಗ ಮೈತುಂಬಾ ಬಟ್ಟೆ ಧರಿಸಬೇಕು. ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಗೆರಟೆ ಸಹಿತ ನೀರು ನಿಲ್ಲುವ ಅವಕಾಶಗಳನ್ನು ತಪ್ಪಿಸಬೇಕು. ಹಣ್ಣಡಿಕೆಯನ್ನು ನೀರಲ್ಲಿ ಹಾಕಿಡುವ ಸಾಂಪ್ರದಾಯಿಕ ವ್ಯವಸ್ಥೆಯಿಂದ ಸೊಳ್ಳೆ ಉತ್ಪಾದನೆ ಹೆಚ್ಚಾಗುತ್ತದೆ. ಹಾಗಾಗಿ ಅಂತಹ ಚಟುವಟಿಕೆಗೆ ರೈತರು ಮುಂದಾಗಬಾರದು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಸೇರಿ ಇತರ ಅಧಿಕಾರಿಗಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.