ETV Bharat / state

ಕೊರೊನಾ ಭೀತಿ.. ಮಂಗಳೂರಿನಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ.. - ಕೊರೊನಾ ಭೀತಿ:ಮಂಗಳೂರಿನಲ್ಲಿ ಸರಳವಾದ ಅಂಬೇಡ್ಕರ್ ಜಯಂತಿ

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಅವರು ಪುರಭವನ ಮುಂಭಾಗದಲ್ಲಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ‌ ಮಾಲಾರ್ಪಣೆ ಮಾಡಿದರು.

corona-panic-simple-ambedkar-jayanti-in-mangalore
ಕೊರೊನಾ ಭೀತಿ: ಮಂಗಳೂರಿನಲ್ಲಿ ಸರಳವಾದ ಅಂಬೇಡ್ಕರ್ ಜಯಂತಿ
author img

By

Published : Apr 14, 2020, 4:43 PM IST

ಮಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ 129ನೇ ಜಯಂತಿಯನ್ನು ಇಂದು ಜಿಲ್ಲಾಡಳಿತ ಸರಳವಾಗಿ ಆಚರಿಸಿತು.

ದಕ್ಷಿಣಕನ್ನಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ದೀಪ ಬೆಳಗಿಸಿ ಅಂಬೇಡ್ಕರ್ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ದ‌.ಕ ಜಿಲ್ಲಾಧಿಕಾರಿ ಸಿಂಧು ರೂಪೇಶ್, ಜಿಪಂ ಸಿಇಒ ಸೆಲ್ವಮನಿ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಅವರು ಪುರಭವನ ಮುಂಭಾಗದಲ್ಲಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ‌ ಮಾಲಾರ್ಪಣೆ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.