ETV Bharat / state

ಕ್ವಾರಂಟೈನ್​ನಲ್ಲಿರುವವರ ಮೇಲಿನ ನಿಗಾಗೆ ಮೊಬೈಲ್​ ಆ್ಯಪ್ ರೆಡಿ​.. ದೇಶದಲ್ಲೇ ಮೊದಲ ಪ್ರಯತ್ನ!! - MLA Harish Poonja news

ಸಾವಿರಾರು ಮಂದಿ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳಿಂದ ಹೀಗೆ ಹೋಂ ಕ್ವಾರಂಟೈನ್ ಆಗಿರುವ ಕೆಲ ಮಂದಿ ಸ್ಟ್ಯಾಂಪ್ ಹಾಕಿದ್ದರೂ ಬೇಕಾಬಿಟ್ಟಿ ಓಡಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಇವರ ಮೇಲೆ ನಿಗಾವಹಿಸಲು ಸುಧಾರಿತ ಆ್ಯಪ್‌ವೊಂದನ್ನ ಆವಿಷ್ಕರಿಸಲಾಗಿದೆ.

MLA Harish Poonja
ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ವಹಿಸಲು ಸಿದ್ದವಾಯ್ತು ಮೊಬೈಲ್​ ಆ್ಯಪ್​
author img

By

Published : Mar 29, 2020, 10:04 PM IST

ಬೆಳ್ತಂಗಡಿ : ಕೊರೊನಾ ವೈರಸ್​ ಹಿನ್ನೆಲೆ ಹೋಂ​ ಕ್ವಾರಂಟೈನ್​ನಲ್ಲಿರುವವರ ಮಾಹಿತಿಗಾಗಿ ಜಿಪಿಎಸ್ ಆಧಾರಿತ ಆ್ಯಪ್ ಅಭಿವೃದ್ಧಿಗೊಳಿಸಲಾಗಿದೆ. ಅದನ್ನು ಬೆಳ್ತಂಗಡಿಯಲ್ಲಿ ಶಾಸಕ ಹರೀಶ್​ ಪೂಂಜಾ ಬಿಡುಗಡೆಗೊಳಿಸಿದರು.

ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಆತಂಕಕ್ಕೊಳಗಾಗಿವೆ. ಈ ನಿಟ್ಟಿನಲ್ಲಿ ಸಾವಿರಾರು ಮಂದಿ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳಿಂದ ಹೀಗೆ ಹೋಂ ಕ್ವಾರಂಟೈನ್ ಆಗಿರುವ ಕೆಲ ಮಂದಿ ಸ್ಟ್ಯಾಂಪ್ ಹಾಕಿದ್ದರೂ ಬೇಕಾಬಿಟ್ಟಿ ಓಡಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಇವರ ಮೇಲೆ ನಿಗಾವಹಿಸಲು ಸುಧಾರಿತ ಆ್ಯಪ್‌ನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಿನಿ ವಿಧಾನಸೌಧದಲ್ಲಿರುವ ವಾರ್ ರೂಮ್‌ನಲ್ಲಿ ಬಿಡುಗಡೆ ಗೊಳಿಸಿದರು.

ಕ್ವಾರಂಟೈನ್​ನಲ್ಲಿರುವವರ ಮೇಲೆ ನಿಗಾ ವಹಿಸಲು ಸಿದ್ದವಾಯ್ತು ಮೊಬೈಲ್​ ಆ್ಯಪ್..​

ಮನೆಯಲ್ಲೇ ನಿಗಾಇರಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐ-ಸರ್ಚ್ ಕಂಪನಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆ್ಯಪ್ Covid 19 home quarantine beat tracker ಬಳಸಿ ನಿಗಾವಹಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ತಾಲೂಕಿನಲ್ಲಿ ಮಾತ್ರವಲ್ಲದೆ ದೇಶದಲ್ಲೇ ಮೊದಲ ಪ್ರಯತ್ನವಾಗಿದೆ.

ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದೆ. ತಾಲೂಕಿನಲ್ಲಿ ಒಂದು ಕೋವಿಡ್-19 ಪ್ರಕರಣ ಬೆಳಕಿಗೆ ಬಂದ ಬಳಿಕ ಹೋಂ ಕ್ವಾರಂಟೈನ್ ಆಗಿರುವವರ ಮೇಲೆ ನಿಗಾಇರಿಸಲು ಈ ವ್ಯವಸ್ಥೆ ನೆರವಾಗಲಿದೆ. ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ವಾರ್ ರೂಮ್‌ನಲ್ಲಿ ಕೂತು ಹೋಂ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ, ಹೇಗಿದ್ದಾರೆ ಮತ್ತು ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಸದ್ಯ ಇದನ್ನು ಬೆಳ್ತಂಗಡಿ ತಾಲೂಕಿನಲ್ಲಿ ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲೆಡೆ ವಿಸ್ತರಿಸಲು ಚಿಂತಿಸಲಾಗ್ತಿದೆ.

ಕೋವಿಡ್-19 ಕ್ವಾರಂಟೈನ್ ಟ್ರ್ಯಾಕರ್ ಆ್ಯಪ್ : ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಆಗಿದ್ದು ತಾಲೂಕು ಆರೋಗ್ಯಧಿಕಾರಿ, ತಹಶೀಲ್ದಾರ್, ವೃತ್ತ ನಿರೀಕ್ಷಕರು ಇದರ ಮೇಲುಸ್ತುವಾರಿ ವಹಿಸಲಿದ್ದಾರೆ. ಬೀಟ್ ಪೊಲೀಸ್ ಅವರ ಸ್ಮಾರ್ಟ್ ಫೋನ್‌ಗಳಿಗೆ ಈ ಆ್ಯಪ್ ಅಳವಡಿಕೆ ಮಾಡಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವ ಬೀಟ್ ಪೊಲೀಸರು ಮನೆ ಮತ್ತು ಶಂಕಿತನ ಭಾವಚಿತ್ರ ಪಡೆದು ಅಪ್‌ಡೇಟ್ ಮಾಡಬೇಕಿದೆ. ಒಂದು ವೇಳೆ ಸ್ಥಳದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಲ್ಲಿ ನೆಟ್ವರ್ಕ್ ಬಂದ ಬಳಿಕ ಅವರ ವಿವರಗಳು ಅಪ್ಡೇಟ್ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.