ETV Bharat / state

ಉಳ್ಳಾಲದಲ್ಲಿ 57 ವರ್ಷದ ಮಹಿಳೆಗೆ ಕೊರೊನಾ ದೃಢ - Ullal corona news

ಖಾಸಗಿ ಆಸ್ಪತ್ರೆಗೆ ಬೇಧಿಯಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮಹಿಳೆ ವಾಸವಾಗಿರುವ ಒಂದೇ ಕಂಪೌಂಡ್‍ನಲ್ಲಿ ಎರಡು ಮನೆಗಳಿದ್ದು, ಎರಡೂ ಮನೆಗಳನ್ನು ಸೀಲ್‍ಡೌನ್ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಉಳ್ಳಾಲದಲ್ಲಿ 57 ವರ್ಷದ ಮಹಿಳೆಗೆ ಕೊರೊನಾ ದೃಢ
ಉಳ್ಳಾಲದಲ್ಲಿ 57 ವರ್ಷದ ಮಹಿಳೆಗೆ ಕೊರೊನಾ ದೃಢ
author img

By

Published : Jun 23, 2020, 11:33 PM IST

ಉಳ್ಳಾಲ : ಎಂಟು ದಿನಗಳ ಕಾಲ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಬೇಧಿಯಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮಹಿಳೆ ವಾಸವಾಗಿರುವ ಉಳ್ಳಾಲದ ಆಜಾದ್‍ನಗರ ಮತ್ತು ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಕೊರೊನ ಭೀತಿ ಎದುರಾಗಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಉಳ್ಳಾಲ ಆಜಾದ್‍ನಗರದ ಮಹಿಳೆಗೆ ಕೊರೊನ ಸೋಂಕು ಯಾವ ರೀತಿ ತಗುಲಿದೆ ಎನ್ನುವುದು ನಿಗೂಢವಾಗಿದೆ. ಆರೋಗ್ಯ ಇಲಾಖೆ, ಉಳ್ಳಾಲ ನಗರ ಪಂಚಾಯಿತಿ ಆಶಾ ಕಾರ್ಯಕತೆಯರು ಕೊರೊನ ಸೋಂಕಿನ ಹೇಗೆ ತಗುಲಿತು ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮನೆ ಮತ್ತು ಆಸ್ಪತ್ರೆ ಸಿಬಂದಿಗಳಿಗೆ ಕ್ವಾರಂಟೈನ್ :

ಮಹಿಳೆ ವಾಸವಾಗಿರುವ ಒಂದೇ ಕಂಪೌಂಡ್‍ನಲ್ಲಿ ಎರಡು ಮನೆಗಳಿದ್ದು, ಎರಡೂ ಮನೆಗಳನ್ನು ಸೀಲ್‍ಡೌನ್ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮಹಿಳೆ ವಾಸವಿರುವ ಮನೆಯಲ್ಲಿ ಒಟ್ಟು 15 ಮಂದಿ ಮತ್ತು ಪಕ್ಕದ ಮನೆಯಲ್ಲಿ ನಾಲ್ವರು ವಾಸವಾಗಿದ್ದು, ಎಲ್ಲರಿಗೂ ಕ್ವಾರಂಟೈನ್ ಅನ್ವಯವಾಗಲಿದೆ.

ಇದರೊಂದಿಗೆ ಎಂಟು ದಿನಗಳ ಕಾಲ ಚಿಕಿತ್ಸೆ ಪಡೆದ ತೊಕ್ಕೊಟ್ಟಿನ ಕೆರೆಬೈಲು ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೊರೊನ ಭೀತಿ ಎದುರಾಗಿದ್ದು, ರೋಗಿಯ ಸಂಪರ್ಕದಲ್ಲಿದ್ದ ಸಿಬ್ಬಂದಿಗಳು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.