ಬಂಟ್ವಾಳ (ದಕ್ಷಿಣ ಕನ್ನಡ) : ಮಾಜಿ ಸಚಿವ ಬಿ. ರಮಾನಾಥ ರೈ ವೈಯಕ್ತಿಕ ಧನ ಸಹಾಯದೊಂದಿಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 44 ಪಂಚಾಯತ್ ಮತ್ತು 27 ಪುರಸಭಾ ವಾರ್ಡ್ಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಆಹಾರ ಸಾಮಗ್ರಿ ಹಸ್ತಾಂತರಿಸಿದ್ದಾರೆ.
ಕಡು ಬಡವರಿಗೆ ಹಾಗೂ ಸಂಕಷ್ಟದಲ್ಲಿ ಜೀವನ ನಡೆಸುವ ನಾಗರಿಕರಿಗೆ ಅಕ್ಕಿ ಮತ್ತು ದಿನ ಬಳಕೆಯ ಸಾಮಗ್ರಿಗಳನ್ನು ಒದಗಿಸುವ ಕಾರ್ಯ ನಡೆಯಿತು. ಸೋಮವಾರ ಈ ಕಾರ್ಯಕ್ಕೆ ಸ್ವತಃ ಬಿ. ರಮಾನಾಥ ರೈ ಚಾಲನೆ ನೀಡಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಉಪಸ್ಥಿತರಿದ್ದರು.